ನಂತರ ಮಾತನಾಡಿದ ಅವರು ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ನ್ಯಾಯಾಧೀಶರಿಗೆ ಸಹಕರಿಸುವಂತೆ ತಿಳಿಸಿದರು. ಹಿರಿಯ ವಕೀಲರು ತಮ್ಮ ಕೆಲಸ ಮುಗಿದ ನಂತರ ವಕೀಲರ ಸಂಘದಲ್ಲಿ ಕನಿಷ್ಠ ೨ ತಾಸು ಸಮಯ ಕಳೆದು ಕಿರಿಯ ವಕೀಲರಿಗೆ ತಮ್ಮ ಅನುಭವ ಹಾಗೂ ಸಲಹೆ ನೀಡುವ ಮೂಲಕ ಕಿರಿಯರು ಉತ್ತಮ ವಕೀಲರಾಗಲು ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಟ್ಟರು.
ಈ ಸಂದರ್ಭ ಶಾಸಕ ಕೆ.ಮಹದೇವ್, ನ್ಯಾಯಾಧೀಶರಾದ ಅರ್ಜುನ್ ಎಸ್ ಮಳ್ಳೂರು, ಜೆ.ಜಯಶಂಕರ್, ವಕೀಲರ ಸಂಘದ ಅಧ್ಯಕ್ಷ ಟಿ.ಎನ್.ಮಹೇಶ್, ಕಾರ್ಯದರ್ಶಿ ಎಂ.ಜೆ.ಸ್ವಾಮಿ, ಖಜಾಂಚಿ ಪ್ರಸನ್ನ, ಉಪಾಧ್ಯಕ್ಷ ಎನ್.ಕರುಣಾಕರ್, ಹಿರಿಯ ವಕೀಲರಾದ ಗೋವಿಂದಗೌಡ, ಬಿ.ವಿ.ಜವರೇಗೌಡ ಸೇರಿದಂತೆ ವಕೀಲರು ಹಾಜರಿದ್ದರು.