ಸಾರ್ವಜನಿಕರಿಗೆ ಪುರಸಭೆಯಿಂದ ಆಗಬೇಕಾಗಿರುವ ಕೆಲಸಗಳನ್ನು ವಿಳಂಬ ಮಾಡದೇ ತ್ವರಿತಗತಿಯಲ್ಲಿ ಮಾಡಿಕೊಡುವಂತೆ ಅಧಿಕಾರಿ ಮತ್ತು ಸಿಬ್ಬಂದಿಗೆ ಶಾಸಕ ಕೆ.ಮಹದೇವ್ ಅವರು ಸೂಚಿಸಿದರು. 29/09/2021

ಪಟ್ಟಣದ ಪುರಸಭೆ ಕಚೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಸಕರ ಕೊಠಡಿ, ಸಭಾಂಗಣ, ಲಿಫ್ಟ್ ವ್ಯವಸ್ಥೆ ಉದ್ಘಾಟನೆ ಮತ್ತು ಪೌತಿ ಖಾತೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಪುರಸಭಾ ಕಚೇರಿಯು ಉತ್ತಮ ಪೀಠೊಪಕರಣಗಳೊಂದಿಗೆ ಸುಸಜ್ಜಿತವಾಗಿದ್ದು ಖಾತೆ ಬದಲಾವಣೆ, ಇ ಸ್ವತ್ತು, ಆಸ್ತಿ ವರ್ಗಾವಣೆ, ಕಂದಾಯ ಪಾವತಿ ಸೇರಿದಂತೆ ಕಚೇರಿಯಲ್ಲಿ ಸಾರ್ವಜನಿಕರಿಗೆ ನೀಡಲಾಗುವ ಎಲ್ಲಾ ಸೇವೆಗಳು ಪಾರದರ್ಶಕವಾಗಿರಬೇಕು, ಕಚೇರಿಗೆ  ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸಬೇಕು, ಖಾತೆ ಬದಲಾವಣೆಗಾಗಿ ಕೋರಿ ಪ್ರತಿನಿತ್ಯ ಅರ್ಜಿಗಳು ಬರುತ್ತಿದ್ದು ಮುಂದಿನ ದಿನಗಳಲ್ಲಿ ಖಾತೆ ಬದಲಾವಣೆಗಾಗಿ ದೊಡ್ಡ ಆಂದೋಲನವನ್ನೇ ಹಮ್ಮಿಕೊಂಡು ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು, ಖಾತೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ಆರಂಭಿಕವಾಗಿ 48 ಮಂದಿ ಫಲಾನುಭವಿಗಳನ್ನು ಗುರುತಿಸಿ ಪೌತಿಖಾತೆ ನಮೂನೆ 3 ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಣೆ ಮಾಡಲಾಯಿತು

ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಶಾಸಕ ಕೆ.ಮಹದೇವ್ ಅವರ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರ ಸಲಹೆ ಸಹಕಾರಗಳೊಂದಿಗೆ ಪಟ್ಟಣದ ನಾಗರಿಕರಿಗೆ ಅಗತ್ಯಕ್ಕನುಗುಣವಾಗಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ನಾಗರತ್ನ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್ ವಿನೋದ್, ಮುಖ್ಯಾಧಿಕಾರಿ ಎ.ಟಿ ಪ್ರಸನ್ನ, ಸದಸ್ಯರಾದ ಪಿ.ಸಿ.ಕೃಷ್ಣ, ರವಿ, ಎಚ್.ಕೆ.ಮಂಜುನಾಥ್, ಪ್ರಕಾಶ್ ಸಿಂಗ್, ನಿರಂಜನ್, ಪ್ರಕಾಶ್, ಮಹೇಶ್, ಭಾರತಿ, ಪುಷ್ಪಲತಾ, ಆಶಾ, ಶ್ವೇತಾ, ನೂರ್ ಜಾನ್, ರೂಹಿಲ್ಲ ಖಾನಂ, ಅರ್ಷದ್, ರೇವತಿ, ಶಿವರಾಂ, ಪ್ರಸಾದ್, ನಳಿನಿ, ಲೀಲಾವತಿ, ಆರೋಗ್ಯ ನಿರೀಕ್ಷಕರಾದ ಆದರ್ಶ, ಪ್ರದೀಪ್ ಮತ್ತು ಪುರಸಭೆ ಸಿಬ್ಬಂದಿ ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top