ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು ಶಾಸಕ ಕೆ.ಮಹದೇವ್ ರವರು ತಾಲ್ಲೂಕಿನ ಸರ್ವಜನಾಂಗವನ್ನು ಒಂದೇ ರೀತಿಯಲ್ಲಿ ಕಾಣುತ್ತಿರುವುದು ಅವರ ಅಭಿವೃದ್ದಿ ಕೆಲಸಗಳಿಗೆ ಹಿಡಿದ ಕೈಗನ್ನಡಿಯಾಗಿದೆ, ಸರ್ವರನ್ನು ಸಮನಾಗಿ ಕಂಡು ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ತಾಲ್ಲೂಕಿನ ಅಭಿವೃದ್ದಿಯೇ ನನ್ನ ಮೊದಲ ಗುರಿಯಾಗಿದ್ದು ಅಧಿಕಾರಾವಧಿಯಲ್ಲಿ ಸರ್ವರಿಗೂ ಅನುಕೂಲಕರವಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದರು.
ಈ ಸಂದರ್ಭ ಮುಖಂಡರಾದ ರಘುನಾಥ್, ದೊರೆಕೆರೆ ನಾಗೇಂದ್ರ, ಜಲೇಂದ್ರ ಗಣೇಶ್, ಅಶೋಕ್, ಇಲಿಯಾಸ್ ಹಾಜರಿದ್ದರು.