ಪಿರಿಯಾಪಟ್ಟಣದ ನ್ಯಾಯಾಲಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಕೀಲರ ಸಂಘದ ಕಚೇರಿ ಉದ್ಘಾಟನಾ ಸಮಾರಂಭವನ್ನು ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಮೈಸೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಎಸ್.ಸುಜಾತ, ಶಾಸಕ ಕೆ.ಮಹದೇವ್ ರವರು ಹಾಗು ಗಣ್ಯರು ಉದ್ಘಾಟಿಸಿದರು. 09/10/2021

ಪಿರಿಯಾಪಟ್ಟಣ: ವಕೀಲ ವೃತ್ತಿಯನ್ನು ಯಶಸ್ವಿಯಾಗಿ ನಡೆಸಲು ಪಂಚ ಕೌಶಲ್ಯ ಅಳವಡಿಸಿಕೊಳ್ಳುವಂತೆ  ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಮೈಸೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಎಸ್.ಸುಜಾತಾ ಕರೆ ನೀಡಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ರೂ. 3.75 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸುಸಜ್ಜಿತ ವಕೀಲರ ಭವನ ಉದ್ಘಾಟಿಸಿ ಅವರು ಮಾತನಾಡಿದರು, ವಕೀಲ ವೃತ್ತಿಯು ಕೇವಲ ಶುಲ್ಕ ಪಡೆದು ಸೇವೆ ನೀಡುವುದಲ್ಲ ಜೊತೆಯಲ್ಲಿ ಸಮಾಜಸೇವೆ ಎಂದು ಪರಿಗಣಿಸಿ ಶೋಷಿತರಿಗೆ ಕಾನೂನು ಅರಿವು ಮೂಡಿಸುವ ವೃತ್ತಿ ಎಂದು ಪರಿಗಣಿಸಬೇಕು, ಎಲ್ಲಾ ಧರ್ಮಗಳಿಗಿಂತ ವಕೀಲ ವೃತ್ತಿ ಧರ್ಮ ದೊಡ್ಡದು, ನೂತನವಾಗಿ ನಿರ್ಮಾಣವಾಗಿರುವ ವಕೀಲರ  ಭವನದಲ್ಲಿ ಯಾವ ಸೌಲಭ್ಯವಿಲ್ಲ ಎಂದು ಹುಡುಕುವ ಮಟ್ಟಿಗೆ ಸುಸಜ್ಜಿತವಾಗಿ ಹೈಟೆಕ್ ಕಟ್ಟಡ ನಿರ್ಮಿಸಲಾಗಿದೆ ಎಂದು ಶ್ಲಾಘಿಸಿದರು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವಕೀಲ ವೃತ್ತಿಗೆ ಬರುವ ಅಗತ್ಯವಿದೆ, ವಕೀಲರು ಯಶಸ್ವಿ ವೃತ್ತಿ ನಡೆಸಲು ಪಂಚ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಶಾಸಕ ಕೆ ಮಹದೇವ್ ರವರು ಮಾತನಾಡಿ ಸಂವಿಧಾನಾತ್ಮಕವಾಗಿ ಕೆಲಸ ಮಾಡಲು ಜನಸಾಮಾನ್ಯರಿಗೆ ನೆರವು ನೀಡುತ್ತಿರುವ ವಕೀಲರ ಸೇವೆ ಗಣನೀಯ, ಕೇವಲ ಶುಲ್ಕ ಪಡೆಯುವ ಉದ್ದೇಶದಿಂದ ವಕೀಲರು ಕೆಲಸ ನಿರ್ವಹಿಸದೆ ನೊಂದವರ ಧ್ವನಿಯಾಗಿ ಕೆಲಸ ಮಾಡುತ್ತಿರುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದಎಂ.ಎಲ್ ರಘುನಾಥ್ ಮತ್ತು  ರಾಜ್ಯ ವಕೀಲರ ಪರಿಷತ್ ಸದಸ್ಯ ಬಿ.ಆರ್.ಚಂದ್ರಮೌಳಿ ಮಾತನಾಡಿದರು.ಈ ಸಂದರ್ಭ ಪಿಡಬ್ಲ್ಯೂಡಿ ಎಇಇ ಎಸ್.ಟಿ ರಘುನಾಥ್, ಸಿವಿಲ್ ಹಿರಿಯ ಶ್ರೇಣಿ ನ್ಯಾಯಾ ಧೀಶರಾದ ಕೆಂಪರಾಜು, ಪ್ರಧಾನ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಮೋಹನ್ ಕುಮಾರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರೋಹಿಣಿ ಡಿ ಬಸಾಪುರ್, ವಕೀಲರ ಸಂಘದ ಅಧ್ಯಕ್ಷ ಜೆ.ಎಸ್ ನಾಗರಾಜ್, ಹಿರಿಯ ವಕೀಲರಾದ ಗೋವಿಂದಗೌಡ, ಬಿ.ವಿ.ಜವರೇಗೌಡ,  ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಎಂ ಪುರುಷೋತ್ತಮ್, ಸಿ.ಕೆ ಮಂಜುನಾಥ್ , ಬಿ.ಎಂ ಕುಮಾರ್, ಕೆ.ಭಾಸ್ಕರ್, ಟಿ.ಎನ್ ಮಹೇಶ್, ಕಾರ್ಯದರ್ಶಿ ಕೆ.ಮಂಜು, ಉಪಾಧ್ಯಕ್ಷರಾದ ಎನ್.ಕರುಣಾಕರ್, ಕೆ.ಎನ್ ದೇವರಾಜ್, ಮಧುಸೂದನ್, ಖಜಾಂಚಿ ಲೋಕೇಶ್, ಜಂಟಿ ಕಾರ್ಯದರ್ಶಿ ಆದರ್ಶ್, ಮಹೇಂದ್ರ, ವಕೀಲ ಬಿ.ಆರ್ ಗಣೇಶ್, ಡಿವೈಎಸ್ ಪಿ ರವಿಪ್ರಸಾದ್, ತಹಶೀಲ್ದಾರ್ ಕೆ.ಚಂದ್ರಮೌಳಿ ಮತ್ತಿತರರಿದ್ದರು. 

1 thought on “ಪಿರಿಯಾಪಟ್ಟಣದ ನ್ಯಾಯಾಲಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಕೀಲರ ಸಂಘದ ಕಚೇರಿ ಉದ್ಘಾಟನಾ ಸಮಾರಂಭವನ್ನು ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಮೈಸೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಎಸ್.ಸುಜಾತ, ಶಾಸಕ ಕೆ.ಮಹದೇವ್ ರವರು ಹಾಗು ಗಣ್ಯರು ಉದ್ಘಾಟಿಸಿದರು. 09/10/2021”

  1. ಸಾಗರ್

    Good job sir ನಮ್ಮ ಹೆಮ್ಮೆ ಶಾಸಕರು ಕೆ ಮಹದೇವ್ ಅಣ್ಣ 2023 ಮತೊಮ್ಮೆ ಶಾಸಕರಗಿ ಬನ್ನಿ ಅಣ್ಣ 🙏💐💐

Leave a Comment

Your email address will not be published. Required fields are marked *

error: Content is protected !!
Scroll to Top