ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ದೊರೆಯುವ ಸೌಲಭ್ಯಗಳನ್ನು ನೀಡುವಲ್ಲಿ ಅಧಿಕಾರಿಗಳು ವಿಳಂಬನೀತಿ ಅನುಸರಿಸಬಾರದು ಎಂದು ಶಾಸಕ ಕೆ.ಮಹದೇವ್ ಕಿವಿಮಾತು ಹೇಳಿದರು.

ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ಸೋಮವಾರದಂದು ಅಂದಾಜು 300 ಮಂದಿ ಸಂತ್ರಸ್ತರಿಗೆ ಪರಿಹಾರ ಧನದ ಚೆಕ್ ವಿತರಿಸಿ ಅವರು ಮಾತನಾಡಿದರು.
ಈ ಬಾರಿಯ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರಿಗೆ ಅನಾನುಕೂಲವಾಗಿದ್ದು ಅಧಿಕಾರಿಗಳು ನಷ್ಟದ ಅಂದಾಜು ತಯಾರಿಸುವಾಗ ಪಾರದರ್ಶಕವಾಗಿ ಕೆಲಸ ನಿರ್ವಹಿಸಿ ಆದಷ್ಟು ಬೇಗ ಸರ್ಕಾರದ ಪರಿಹಾರಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭ ತಹಸೀಲ್ದಾರ್ ಶ್ವೇತಾ, ಶಿರಸ್ತೆದಾರ್‌ಗಳಾದ ಪ್ರಕಾಶ್, ಟ್ರಿಜಾ, ಕಂದಾಯ ಅಧಿಕಾರಿಗಳಾದ ಮಹೇಶ್, ಮಂಜುನಾಥ್, ಗ್ರಾಮಲೆಕ್ಕಿಗರಾದ ಪುಷ್ಪಲತಾ, ಅಶ್ವಿನಿ, ರಾಜೇಶ್, ಆನಂದ್, ಪ್ರದೀಪ್, ಮನು, ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top