ಹಾರನಹಳ್ಳಿ ಹೋಬಳಿ ಕೇಂದ್ರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂಬ ಹಣೆಪಟ್ಟಿ ಕಳಚಲು ಸಾಕಷ್ಟು ಅನುದಾನಗಳನ್ನು ಜಾರಿಗೆ ತಂದಿದ್ದು, ಶೀಘ್ರದಲ್ಲೇ ಕಾಮಗಾರಿಗಳನ್ನು ಪ್ರಾರಂಭಿಸುವ ಭರವಸೆಯನ್ನು ಶಾಸಕ ಕೆ.ಮಹದೇವ್ ನೀಡಿದರು.

ಮಂಗಳವಾರದAದು ತಾಲ್ಲೂಕಿನ ವಿವಿದೆಡೆ ಪ್ರವಾಸ ಕೈಗೊಂಡು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿ ಹಾರನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಾರನಹಳ್ಳಿಯಲ್ಲಿ ಪಬ್ಲಿಕ್ ಶಾಲೆ ತೆರೆಯಲು ಸರ್ಕಾರದಿಂದ ರೂ.8 ಕೋಟಿ ಮಂಜೂರಾಗಿದ್ದು ಈಗಾಗಲೆ ರೂ.65 ಲಕ್ಷ ಹಣ ಬಿಡುಗಡೆಯಾಗಿದೆ, ಈ ಭಾಗದ ಗ್ರಾಮದಲ್ಲಿನ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ರೂ.85 ಲಕ್ಷ ಹಣ ಮಂಜೂರಾಗಿದ್ದು ಶೀಘ್ರದಲ್ಲೆ ಕಾಮಗಾರಿಗೆ ಚಾಲನೆ ನೀಡಿ ಹಿಂದುಳಿದ ಹೋಬಳಿ ಎಂಬ ಹಣೆ ಪಟ್ಟಿ ಕಳಚಿ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವುದು ನನ್ನ ಗುರಿ ಎಂದರು. ವಿರೋಧಿಗಳ ಟೀಕೆಗೆ ಅಭಿವೃದ್ದಿಯ ಮೂಲಕ ಉತ್ತರಿಸುವುದಾಗಿ ತಿಳಿಸಿದರು. ತಾಲ್ಲೂಕಿನ ಐಚನಹಳ್ಳಿ ಮತ್ತು ಕಣಗಾಲು ಗ್ರಾಮದ ಎಸ್‌ಟಿ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ, ವಡೇರಹೊಸಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ, ಬೆಟ್ಟದಪುರದ ಪದವಿ ಪೂರ್ವ ಕಾಲೇಜು ಕೊಠಡಿ ನಿರ್ಮಾಣ ಕಾಮಗಾರಿ, ರಾವಂದೂರು ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ.ಇಒ ಡಿ.ಸಿ.ಶೃತಿ, ಜಿ.ಪಂ.ಸದಸ್ಯೆ ರುದ್ರಮ್ಮ, ಹಾರನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷೆ ಯಶೋಧಾ, ಎಸ್‌ಡಿಎಂಸಿ ಅಧ್ಯಕ್ಷ ಸಣ್ಣಯ್ಯ, ಉಪಾಧ್ಯಕ್ಷೆ ಶಾಂತಮ್ಮ ಬಿಇಒ ಚಿಕ್ಕಸ್ವಾಮಿ, ಎಇಇ ಗಳಾದ ನಾಗರಾಜ್, ಪ್ರಭು, ಬಸವರಾಜ್, ಸಿಡಿಪಿಒ ಇಂದಿರಾ, ಟಿಹೆಚ್‌ಒ ನಾಗೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top