ಪಿರಿಯಾಪಟ್ಟಣ: ತಾಲ್ಲೂಕಿನ ಅಧಿಕಾರಿಗಳನ್ನು ನಮ್ಮ ಕುಟುಂಬದ ಒಬ್ಬ ಸದಸ್ಯರಂತೆ ಕಾಣುತ್ತಿದ್ದರೂ ಕಳೆದ ಒಂಬತ್ತು ತಿಂಗಳಲ್ಲಿ ಅಧಿಕಾರಿಗಳಿಂದ ನಿರೀಕ್ಷೆ ಇಟ್ಟುಕೊಂಡಿದ್ದ ಯಾವ ಕೆಲಸಗಳು ಪರಿಪರ‍್ಣವಾಗಿ ನಡೆದಿಲ್ಲ ಎಂದು ಶಾಸಕ ಕೆ ಮಹದೇವ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ಕೆಡಿಪಿ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಹಿಂದಿನ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದ ವಿಷಯಗಳ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳು ಅನುಪಾಲನಾ ವರದಿ ನೀಡದಿರುವುದನ್ನು ಗಮನಿಸಿದಲ್ಲಿ ಅಧಿಕಾರಿಗಳಲ್ಲಿ ಶಿಸ್ತಿನ ಕೊರತೆ ಕಂಡು ಬರುತ್ತಿದೆ ಎಂದು ಆರೋಪಿಸಿದರು. ಈವರೆಗೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಇನ್ನಾದರೂ ಅಧಿಕಾರಿಗಳು ತಾಲೂಕಿನ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿದರು. ಜನಪ್ರತಿನಿಧಿಗಳ ನಿರೀಕ್ಷೆಗೆ ತಕ್ಕಂತೆ ತಾಲ್ಲೂಕಿನಲ್ಲಿ ರ‍್ಕಾರಿ ಅಧಿಕಾರಿಗಳು ರ‍್ತವ್ಯ ನರ‍್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಇಲಾಖೆ: ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನರ‍್ದೇಶಕ ಶಿವಕುಮಾರ್ ಮಾಹಿತಿ ನೀಡುತ್ತಾ ಕೃಷಿ ಯಾಂತ್ರೀಕರಣ ಯೋಜನೆ, ಸಾವಯವ ಭಾಗ್ಯ ಯೋಜನೆ, ಶೂನ್ಯ ಬಂಡವಾಳ ಕೃಷಿ ಪದ್ಧತಿ, ಸೇರಿದಂತೆ ವಿವಿಧ ಯೋಜನೆಗಳಲ್ಲಿ ಕೃಷಿ ಪರಿಕರಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು. ಪ್ರಧಾನಮಂತ್ರಿ ಕೃಷಿ ಸುರಕ್ಷಾ ಯೋಜನೆಯಡಿ ಕಳೆದ ಸಾಲಿನಲ್ಲಿ ತಾಲ್ಲೂಕಿಗೆ ರು. 90.36 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಈ ರ‍್ಷ ರು.50 ಲಕ್ಷ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದರು. ಮಣ್ಣಿನ ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಲಘು ಪೋಷಕಾಂಶಗಳನ್ನು ಕೃಷಿ ಇಲಾಖೆಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂರ‍್ಭದಲ್ಲಿ ಜಿ.ಪಂ. ಸದಸ್ಯ ವಿ.ರಾಜೇಂದ್ರ ಮಾತನಾಡಿ ತಂಬಾಕಿಗೆ ರ‍್ಯಾಯವಾಗಿ ರ‍್ಥಿಕ ಲಾಭ ತಂದುಕೊಡುವ ಬೆಳೆಗಳ ಮಾಹಿತಿ ನೀಡುವ ಕರ‍್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕೆಂದು ತಿಳಿಸಿದರು. ಶಾಸಕ ಕೆ ಮಹದೇವ್ ಪ್ರತಿಕ್ರಿಯೆ ನೀಡಿ ತಾಲ್ಲೂಕಿನಲ್ಲಿ ಈವರಿಗಿನ ರೈತ ಆತ್ಮಹತ್ಯೆ ಪ್ರಕರಣಗಳ ಪಟ್ಟಿ, ಕೃಷಿ ಇಲಾಖೆಯಿಂದ ಸ್ಪ್ರಿಂಕ್ಲರ್ ಸೆಟ್, ಕೃಷಿಹೊಂಡ ನರ‍್ಮಾಣ ಸೇರಿದಂತೆ ಇಲಾಖೆಯ ವಿವಿಧ ಸವಲತ್ತುಗಳನ್ನು ಪಡೆದಿರುವ ರೈತರ ಮಾಹಿತಿ ನೀಡುವಂತೆ ಕೃಷಿ ಅಧಿಕಾರಿಗೆ ತಿಳಿಸಿದರು.
*ಆರೋಗ್ಯ ಇಲಾಖೆ; ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರಿಲ್ಲ ಎಂಬ ದೂರುಗಳು ಸಾಕಷ್ಟು ಕೇಳಿಬರುತ್ತಿದ್ದು ತಾಲ್ಲೂಕಿನ ಕಂಪ್ಲಾಪುರ, ಬೆಟ್ಟದಪುರ, ಕೊಪ್ಪ ಮತ್ತು ರಾವಂದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ ವೈದ್ಯರನ್ನು ಶೀಘ್ರದಲ್ಲೇ ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ ಮಹದೇವ್ ಭರವಸೆ ನೀಡಿದರು. ರ‍್ಕಾರದಿಂದ ಆರೋಗ್ಯ ಇಲಾಖೆಗೆ ಬರುವ ಸೌರ‍್ಯಗಳು ಸದ್ಬಳಕೆಯಾಗಬೇಕು ಹಾಗೂ ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ವೈದ್ಯರ ರ‍್ತವ್ಯವಾಗಿದ್ದು ಜನರ ಜೀವದ ಜೊತೆ ಚೆಲ್ಲಾಟವಾಡುವುದು ಬೇಡ ಎಂದು ಎಚ್ಚರಿಕೆ ನೀಡಿದರು. ಖಾಸಗಿ ಔಷಧಿ ಅಂಗಡಿಗಳಲ್ಲಿ ರ‍್ಕಾರದ ಔಷಧಗಳು ಮಾರಾಟವಾಗುವುದು ಕಂಡುಬರುತ್ತಿದೆ ಎಂದು ಜಿ.ಪಂ. ಸದಸ್ಯೆ ಸಿ. ಮಣಿ ಆರೋಪಿಸಿದರು. ಪಟ್ಟಣದ ಸರ‍್ವಜನಿಕ ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯಗಳ ಕೊರತೆಯಾಗಿದೆ ಎಂದು ರೋಗಿಗಳಿಂದ ದೂರು ಬರುತ್ತಿದ್ದು ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಸರ‍್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ: ಸಭೆಯಲ್ಲಿ ಇಲಾಖೆಯ ಸಹಾಯಕ ನರ‍್ದೇಶಕ ರಾಮೇಗೌಡ ಮಾಹಿತಿ ನೀಡುತ್ತಾ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಕಾಲನಿಗಳ ರಸ್ತೆ ಕಾಂಕ್ರೀಟೀಕರಣಕ್ಕೆ ರೂ 30 ಕೊಟಿ ಹಾಗೂ ಪರಿಶಿಷ್ಟ ರ‍್ಗ ಕಾಲನಿಗಳ ರಸ್ತೆ ಕಾಂಕ್ರೀಟೀಕರಣಕ್ಕೆ ರೂ 27.89 ಕೋಟಿ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು. ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನ ನರ‍್ಮಾಣಕ್ಕಾಗಿ ರೂ 6 ಕೋಟಿ ಹಣ ಬಿಡುಗಡೆಯಾಗಿದೆ ಎಂದರು. ಶಾಸಕ ಕೆ ಮಹದೇವ್ ಮಾತನಾಡಿ ಪಟ್ಟಣದಲ್ಲಿ ಅನುದಾನದ ಕೊರತೆಯಿಂದಾಗಿ ಸ್ಥಗಿತಗೊಂಡಿರುವ ಅಂಬೇಡ್ಕರ್ ಭವನ, ಅರಸು ಭವನ, ವಾಲ್ಮೀಕಿ ಭವನ, ಬಾಬು ಜಗಜೀವನ್ ರಾಮ ಭವನ ನರ‍್ಮಾಣ ಕಾಮಗಾರಿಗಳನ್ನು ಕೂಡಲೇ ಪುನರಾರಂಭಿಸಿ ಮೂರು ತಿಂಗಳಲ್ಲಿ ಕಾಮಗಾರಿ ಪರ‍್ಣಗೊಳಿಸುವಂತೆ ಎಂಜಿನಿರ‍್ಗಳಿಗೆ ಆದೇಶ ನೀಡಿದರು. ಈವರೆಗೂ ವಿದ್ಯುತ್ ಸೌಲಭ್ಯವನ್ನೇ ಕಾಣದ ಕಾಡಂಚಿನ ಗ್ರಾಮಗಳ, ಹಾಡಿಗಳ ಮನೆಗಳಿಗೆ ಕೂಡಲೇ ವಿದ್ಯುತ್ ಸಂರ‍್ಕವನ್ನು ಕಲ್ಪಿಸುವಂತೆ ಸೆಸ್ಕ್ ಎಇಇಗೆ ಸೂಚಿಸಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆ, ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಪಶುಸಂಗೋಪನಾ ಇಲಾಖೆ, ಅಬಕಾರಿ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
ಇದೇ ಸಂರ‍್ಭದಲ್ಲಿ ಅಂರ‍್ಜಾತಿಯ ವಿವಾಹಕ್ಕೆ ರ‍್ಕಾರದಿಂದ ನೀಡಲಾಗುವ ಪ್ರೋತ್ಸಾಹ ಯೋಜನೆಯಡಿಯಲ್ಲಿ ತಾಲ್ಲೂಕಿನ ರ‍್ವ ದಂಪತಿಗಳಿಗೆ ರ‍್ಕಾರದ ಚೆಕ್ಕನ್ನು ವಿತರಿಸಿದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಕೆ.ಆರ್. ನಿರೂಪ, ಉಪಾಧ್ಯಕ್ಷೆ ಜಯಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ ಜಿ.ಪಂ. ಸದಸ್ಯರಾದ ಕೆ.ಸಿ. ಜಯಕುಮಾರ್, ಕೌಶಲ್ಯ, ಸಿ.ಮಣಿ, ರುದ್ರಮ್ಮ, ವಿ.ರಾಜೇಂದ್ರ, ಕೆ. ಎಸ್. ಮಂಜುನಾಥ್, ತಾ.ಪಂ. ಇಒ ಡಿ.ಸಿ ಶ್ರುತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top