
ರಾವಂದೂರು ದೊಡ್ಡಮ್ಮತಾಯಿ ಕೆರೆ ಸಂಪೂರ್ಣ ಭರ್ತಿಯಾದ ಹಿನ್ನೆಲೆ ಶಾಸಕರಾದ ಕೆ ಮಹದೇವ್ ಕೆರೆಗೆ ಬಾಗಿನ ಸಮರ್ಪಿಸಿ ನಂತರ ಮಾತನಾಡಿದರು
ತಾಲೂಕಿನ ಅತಿದೊಡ್ಡ ಕೆರೆಯಿಂದ ಪ್ರಸಿದ್ಧಿಪಡೆದ ಈ ಕೆರೆ ಸುಮಾರು 14 ವರ್ಷಗಳ ನಂತರ ಈಗ ಬೀಳುತ್ತಿರುವ ಅಕಾಲಿಕ ಮಳೆಯಿಂದಾಗಿ ಸಂಪೂರ್ಣ ಭರ್ತಿಯಾಗಿ ಕೆರೆಕೋಡಿ ಹರಿಯುವ ಮೂಲಕ ಇಲ್ಲಿನ ಜನತೆಗೆ ಸಂತಸ ಉಂಟು ಮಾಡಿದೆ. ಕೆರೆಗಳನ್ನು ಸಂರಕ್ಷಿಸಿ:- ಇತ್ತೀಚಿನ ದಿನಗಳಲ್ಲಿ ಕೆರೆಗಳನ್ನು ಮುಚ್ಚುವ ಮೂಲಕ ಅಂತರ್ಜಲ ಮಟ್ಟ ಕುಸಿದಿರುವುದು ತುಂಬಾ ಆತಂಕಕಾರಿ ವಿಷಯವಾಗಿದ್ದು ಇವುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಕೆರೆಗಳಿಂದ ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗಿ ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ಯೋಗ್ಯವಾದ ನೀರು ಸಿಗುತ್ತದೆ ಹಾಗೂ ಜಾನುವಾರುಗಳಿಗೆ ಮತ್ತು ವ್ಯವಸಾಯಕ್ಕೆ ಅನುಕೂಲ ವಾಗಿರುವುದರಿಂದ ಕೆರೆಗಳ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧಿಕಾರಿ ಮಲ್ಲೇಶ್ ಕಾರ್ಯದರ್ಶಿ ಬಸವರಾಜು ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಘುನಾಥ, ಗ್ರಾಪಂ ಸದಸ್ಯ ವಿಜಯಕುಮಾರ್, ಶ್ರೀಕಂಠ, ಭಾರತಿ, ಮಾಜಿ ಗ್ರಾಪಂ ಅಧ್ಯಕ್ಷ ಆರ್.ಎಲ್ ಮಣಿ, ಮುಖಂಡರಾದ ಆರ್ ವಿ ನಂದೀಶ್, ಸೋಮು, ಆರ್ ವಿ ಬಸವರಾಜು, ದಿನೇಶ್, ಮಹದೇವ್, ವಿಎಸ್ಎಸ್ ಮಾಜಿ ಅಧ್ಯಕ್ಷ ವಿಜಯ್, ಶಿವರಾದ್ಯ, ರಾಮಚಂದ್ರ, ಶಿವಕುಮಾರ್, ನಿವೃತ್ತ ಶಿಕ್ಷಕ ಪುಟ್ಟಪ್ಪ, ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.