ಪಿರಿಯಾಪಟ್ಟಣದ ಟ್ರಾಫಿಕ್ ಸಿಗ್ನಲ್ ಗೆ ಶಾಸಕ ಕೆ.ಮಹದೇವ್ ರವರಿಂದ ಚಾಲನೆ 27/12/2021

ಪಿರಿಯಾಪಟ್ಟಣದ ಜನರ ಬಹುದಿನದ ಬೇಡಿಕೆ ಕೊನೆಗೂ ನೆರವೇರಿದ್ದು ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ 26 ಲಕ್ಷ ವೆಚ್ಚದಲ್ಲಿ ಶಾಸಕ ಕೆ ಮಹದೇವ್ ಚಾಲನೆ ನೀಡಿದರು. ಪಟ್ಟಣದ ಬಸವೇಶ್ವರ ಸರ್ಕಲ್ ತಾಲೂಕಿನ ಪ್ರಮುಖ ವೃತ್ತಗಳಲ್ಲಿ ಒಂದಾಗಿದ್ದು ಹಾಸನ ಮಡಿಕೇರಿ ಕೇರಳ ಮತ್ತು ಮೈಸೂರು ಮಾರ್ಗಗಳಿಗೆ ಪ್ರಯಾಣಿಕರು ತೆರಳುವ ಪ್ರಮುಖ ವೃತ್ತ ವಾಗಿದೆ ಯು ವೃತ್ತದಲ್ಲಿ ಸರಿಯಾದ ಸಿಗ್ನಲ್ ಲೈಟ್ ಇಲ್ಲದೆ ತೀವ್ರ ತೊಂದರೆ ಎದುರಾಗಿತ್ತು ಈ ವೃತ್ತದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ಸಣ್ಣಪುಟ್ಟ ವಾಹನ ಗುದ್ದಾಟಗಳು ನಡೆಯುತ್ತಲೇ ಇತ್ತು ಅದಕ್ಕೆ ಸಿಗ್ನಲ್ ಲೈಟ್ ಅಳವಡಿಸಬೇಕು ಎಂಬುದು ಪಟ್ಟಣದ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು. ಎಂಎಸ್ಐಎಲ್ ವತಿಯಿಂದ ಪೊಲೀಸ್ ಇಲಾಖೆಯ ಸೂಚನೆಯಂತೆ 26 ಲಕ್ಷ ರೂಗಳ ವೆಚ್ಚದಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾಗಿದ್ದು ಬಹುದಿನಗಳ ಬೇಡಿಕೆ ಇಂದು ಈಡೇರಿದಂತಾಗಿದೆ. ಈ ವೇಳೆ ಶಾಸಕ ಕೆ ಮಹದೇವ್ ರವರು ಮಾತನಾಡಿ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗೆ ಮಾತ್ರ ಆಸಕ್ತಿ ವಹಿಸುತ್ತಿದ್ದಾರೆ ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ ಎಂಬ ಆರೋಪ ಇತ್ತು ನನ್ನ ಅವಧಿಯಲ್ಲಿ ಪುರಸಭೆ ಸದಸ್ಯರಿಗೆ ಮೀಸಲಾತಿ ಗೊಂದಲದಿಂದ 1.5 ವರ್ಷ ಅಧಿಕಾರ ಸಿಕ್ಕಿರಲಿಲ್ಲ ನಾನು ಪುರಸಭೆಗೆ ಅಧ್ಯಕ್ಷನಾದ ಅವಧಿಯಲ್ಲಿ ಬೀದಿದೀಪ ಅಳವಡಿಸಿ ಸ್ವಚ್ಛತೆಗೆ ಟ್ರ್ಯಾಕ್ಟರ್ ಖರೀದಿ ಮಾಡಿದ್ದು 1200 ಖಾಲಿ ನಿವೇಶನ ಮಾಡಿದ್ದು 450 ಮನೆಗಳ ನಿರ್ಮಾಣ ಮಾಡಿ ಕೊಟ್ಟಿದ್ದೇನೆ . ಈ ಸೇವೆಯಿಂದಲೇ ಶಾಸಕ ಸ್ಥಾನಕ್ಕೆ ಬಂದಿದ್ದೇನೆ ಹಿಂದಿನ ಶಾಸಕರು ಬಿ ಡಿ ಎ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು ಆದರೆ ಪಟ್ಟಣದ ಸಂಪೂರ್ಣ ಅಭಿವೃದ್ಧಿ ಕಡೆಗಣಿಸಿದರು ಆದರೆ ನಾನು ಅಧಿಕಾರಕ್ಕೆ ಬಂದ ಮೇಲೆ ಪುರಸಭೆ ಸದಸ್ಯರಿಗೆ ಸೂಕ್ತ ಸೂಚನೆ ನೀಡಿದ್ದು ಈಗ ಸಿಗ್ನಲ್ ಅಳವಡಿಸಲಾಗಿದೆ ಎಂದು ತಿಳಿಸಿದರು.

ನಂತರ ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದ್ದು ಪೊಲೀಸರು ಇದನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಪಟ್ಟಣದ ಇಕ್ಕೆಲಗಳಲ್ಲಿ ಇಂಟರ್ಲಾಕ್ ಅಳವಡಿಸಲು ಶಾಸಕರ ಸೂಚನೆಯಂತೆ ಸಂಸದರಿಗೆ ಮನವಿ ಮಾಡಿದ್ದು ಅದು ಕೂಡ ಅನುಮೋದನೆ ನೀಡಲಾಗುತ್ತಿದೆ ಇದು ಯಶಸ್ವಿಯಾದರೆ ಪಟ್ಟಣ ಕೆಸರು ಮುಕ್ತವಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಶಾಸಕ ಕೆ ಮಹದೇವ್ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಕ್ಕೆ 5 ಲಕ್ಷರೂ ಪರಿಹಾರ ಚೆಕ್ ವಿತರಿಸಿದರು

ಸಿಗ್ನಲ್ ಲೈಟ್ ಉದ್ಘಾಟಿಸಿದ ಶಾಸಕ ಕೆ ಮಹದೇವ್, ಇನ್ಸ್ ಪೆಕ್ಟರ್ ಗಳಾದ ಜಗದೀಶ್ ಪ್ರಕಾಶ್ ಹಾಗೂ ಪಿಎಸ್ಐ ತಿಪ್ಪಾರೆಡ್ಡಿ ಅವರೊಂದಿಗೆ ಸೇರಿ ಹೆಲ್ಮೆಟ್ ಧರಿಸದೆ ಸಂಚಾರ ಮಾಡುತ್ತಿದ್ದ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಸು ರಕ್ಷಣೆಯ ಸಂಚಾರ ಮಾಡುವಂತೆ ತಿಳಿ ಹೇಳಿದ್ದು ವಿಶೇಷವಾಗಿತ್ತು

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ ಚಂದ್ರಮೌಳಿ ಪುರಸಭೆ ಉಪಾಧ್ಯಕ್ಷ ನಾಗರತ್ನ ಉಮೇಶ್ ಜೆಡಿಎಸ್ ತಾಲೂಕು ಅಧ್ಯಕ್ಷ ಅಣೆ ಶೆಟ್ಟಿ ಪುರಸಭಾ ಸದಸ್ಯರಾದ ಭಾರತಿ ಪಿಸಿ ಕೃಷ್ಣ ರುಹಿಲ್ಲಾ ಖಾನಮ್ ನಿರಂಜನ್ ರವಿ ಮಂಜುಳಾ ರತ್ನಮ್ಮ ಪ್ರಕಾಶ್ ಸಿಂಗ್ ಲೀಲಾವತಿ ಶಿವರಾಮೇಗೌಡ ಪ್ರಸಾದ್ ನಳಿನೀ ರೇವತಿ ಟಿಎಪಿಸಿಎಂಎಸ್ ನಿರ್ದೇಶಕ ಮುಕೇಶ್ ನಾಗೇಂದ್ರ ಸರ್ಕಾರಿ ನೌಕರರ ಮಾಜಿ ಅಧ್ಯಕ್ಷರಾದ ಶಿವಯೋಗಿ ಎಂ ಕೆ ಪ್ರಕಾಶ್ ಮುಖಂಡರಾದ ಇಲಿಯಾಸ್ ಗಿರೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top