
ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ ಶಾಸಕ ಕೆ ಮಹದೇವ್ ರವರು 3.25 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಶಾಲಾ ನೂತನ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿದರು. ತಾಲೂಕಿನ ಹಸುವಿನ ಕಾವಲು ಬ್ಯಾಡರ ಬೆಳಗುಲಿ ಹಲಗನಹಳ್ಳಿ ಮತ್ತು ಕೌಲನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ತಾಲೂಕನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಉದ್ದೇಶದಿಂದ ವಿಧಾನಸೌಧದ ಪ್ರತಿಯೊಬ್ಬ ಸಚಿವರನ್ನು ಭೇಟಿ ಮಾಡಿ ತಾಲೂಕಿನ ಅಭಿವೃದ್ಧಿಗಾಗಿ ಹಣ ತರುತ್ತಿದ್ದೇನೆ ಹೊರತು ನನ್ನ ವಯಕ್ತಿಕ ಹಿತಾಸಕ್ತಿಗಳಿಗಲ್ಲ ಕೆಲವು ವಿರೋಧಿಗಳು ನನ್ನ ವಿರುದ್ಧ ಮಾಡುತ್ತಿರುವ ಕಾರ್ಯಕರ್ತರು ಕಿವಿಗೊಡದೆ ಮುಂದಿನ ವಿಧಾನಸಭೆಯ ಚುನಾವಣೆಗೆ ಗೆಲ್ಲುವತ್ತ ಮನಸ್ಸು ಮಾಡಬೇಕು. ತಾಲೂಕಿನಲ್ಲಿ ಗ್ರಾಮಪಂಚಾಯಿತಿಗಳಲ್ಲಿ ನಡೆದ ಚುನಾವಣೆಯಲ್ಲಿ ಸ್ವಲ್ಪ ಹಿನ್ನಡೆ ಆಗಿರಬಹುದು ಹೊರತು ಆದರೆ ನನ್ನ ಕಾರ್ಯಕರ್ತರು ಅದಕ್ಕೆ ಎದೆಗುಂದುವ ಅಗತ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಶೀಲ್ದಾರ್ ಕೆ ಚಂದ್ರಮೌಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಮುಖಂಡರಾದ ರಂಗಸ್ವಾಮಿ ಎಇಇ ಗಳಾದ ಜಯಂತ್ ಮಂಜುನಾಥ್ ಪ್ರಭು, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮಯ್ಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮುಖಂಡರುಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.