ಇಂದು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿ ಲೋಕಸಭೆ ಚುನಾವಣೆಯಲ್ಲಿ ಸಹ ಮೈತ್ರಿ ಮಾಡಿಕೊಂಡಿದೆ ಎನ್ನುವುದನ್ನು ಎರಡೂ ಪಕ್ಷಗಳ ಸ್ಥಳೀಯ ಮುಖಂಡರು ಕಾರ್ಯಕರ‍್ತರಿಗೆ ಮನವರಿಕೆ ಮಾಡಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಲೋಕಸಭೆ ಚುನಾವಣೆಯ ಮೈಸೂರು-ಕೊಡಗು ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ರ‍್ಥಿ ಸಿ.ಎಚ್.ವಿಜಯಶಂಕರ್ ಪರ ಬುಧವಾರ ಮತಯಾಚನೆ ಮಾಡಿ ಮಾತನಾಡಿದರು. ಪ್ರಾರಂಭದಲ್ಲಿ ಎರಡು ಪಕ್ಷಗಳಲ್ಲಿ ಗೊಂದಲಗಳಿದ್ದರೂ ಕೂಡ ಅದೆಲ್ಲಾ ಬಗೆಹರಿದಿದ್ದು ಪ್ರಸ್ತುತ ಸಮ್ಮಿಶ್ರ ರ‍್ಕಾರದಿಂದಾಗಿ ಮೈತ್ರಿ ಅಭ್ರ‍್ಥಿಯ ಗೆಲುವಿಗೆ ಕರ‍್ಯರ‍್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರಮೋದಿ ದೇಶದ ರೈತರ,ಹಿಂದುಳಿದ,ಅಲ್ಪಸಂಖ್ಯಾತರ,ದಲಿತ ರ‍್ಗದ ಜನರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದು, ಕೇವಲ ಶ್ರೀಮಂತರು, ಉದ್ಯಮಿಗಳ ರ‍್ಥಿಕ ಅಭಿವೃದ್ದಿಗೆ ಮಾತ್ರ ಆದ್ಯತೆ ನೀಡಿದ್ದಾರೆ.ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕಿದ ಕೇಂದ್ರ ರ‍್ಕಾರದ ನಿಲುವಿನಿಂದಾಗಿ ಇಂದು ರೈತರ ಸ್ಥಿತಿ ಅಧೋಗತಿಗೆ ತಲುಪಿದೆ ಎಂದು ದೂರಿದರು. ಮೈತ್ರಿ ಅಭ್ರ‍್ಥಿ ಸಿ.ಎಚ್.ವಿಜಯಶಂಕರ್ ಮಾತನಾಡಿ ಈ ಹಿಂದೆ ಎರಡು ಬಾರಿ ಸೋಲನುಭವಿಸಿದ್ದೇನೆ ಆದರೆ ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಜಾತ್ಯಾತೀತ ಸಿದ್ದಾಂತವುಳ್ಳ ಎರಡು ಪಕ್ಷಗಳು ಸಮ್ಮಿಶ್ರರ‍್ಕಾರ ರಚಿಸಿದ್ದು ನನ್ನ ಗೆಲುವುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಿ.ಟಿ.ದೇವೇಗೌಡ ರ‍್ಚಿಸಿ ಕರ‍್ಯರ‍್ತರಲ್ಲಿನ ಗೊಂದಲಕ್ಕೆ ತೆರೆ ಎಳೆದಿದ್ದಾರೆ ಎಂದು ಸ್ಪಷ್ಠಪಡಿಸಿದರು.
ಮಾಜಿ ಶಾಸಕರಾದ ಕೆ.ವೆಂಕಟೇಶ್ ಮಾತನಾಡಿದರು.
ಈ ಸಂರ‍್ಭದಲ್ಲಿ ಬೆಣಗಾಲು, ಆರ‍್ತಿ, ಕೊಪ್ಪ, ಆಲನಹಳ್ಳಿ, ಮುತ್ತೂರು, ಚೌತಿ, ಮಾಲಂಗಿ, ರಾಮನಾಥತುಂಗ ಗ್ರಾಮಗಳಲ್ಲಿ ಪ್ರಚಾರ ಮಾಡಿದರು.
ಪ್ರಚಾರ ಮೊಟುಕುಗೊಳಿಸಿ ಹಿಂತಿರುಗಿದ ಶಾಸಕ ಕೆ.ಮಹದೇವ್: ನಿಗದಿತ ಕರ‍್ಯಕ್ರಮದಂತೆ ಪರ‍್ಣ ಪ್ರಮಾಣದಲ್ಲಿ ಪ್ರಚಾರ ಕೈಗೊಳ್ಳದ ಶಾಸಕ ಕೆ.ಮಹದೇವ್ ಕಾಲು ನೋವಿನಿಂದ ಬಳಲುತ್ತಿದ್ದರಿಂದ ಪ್ರವಾಸ ಮೊಟಕುಗೊಳಿಸಿದರು.
ಈ ಸಂರ‍್ಭದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಪಿ. ಪ್ರಶಾಂತ್ ಗೌಡ, ತಾ.ಪಂ. ಸದಸ್ಯರಾದ ಎಸ್.ರಾಮು,ಎ.ಟಿ.ರಂಗಸ್ವಾಮಿ,ಆರ್.ಎಸ್.ಮಹದೇವ, ಎಪಿಎಂಸಿ ಅಧ್ಯಕ್ಷ ದೊಡ್ಡ ಹರವೆ ರಾಜಯ್ಯ, ಪುರಸಭೆ ಸದಸ್ಯ ರವಿ, ಬೈಲಕುಪ್ಪೆ ಗ್ರಾ.ಪಂ. ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ಮಂಜುನಾಥ್, ಮುಖಂಡರುಗಳಾದ ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಹಮತ್ತ್ ಜಾನ್ ಬಾಬು, ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಮುಖಂಡರಾದ ಟಿ.ಡಿ.ಗಣೇಶ್,ಡಿ.ಟಿ.ಸ್ವಾಮಿ, ಸೋಮಶೇಖರ್,ಶೇಖರ್,ಜವರಪ್ಪ,ನಿಲಂಗಾಲಜಯಣ್ಣ, ಎಂ.ಎಂ. ರಾಜೇಗೌಡ, ಅಣ್ಣಯ್ಯಶೆಟ್ಟಿ, ಪುಟ್ಟಸ್ವಾಮಿ, ಶಿವಪ್ರಕಾಶ್,ಮಂಜುನಾಥ ಸ್ವಾಮಿ, ರಘು, ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top