
ಪಿರಿಯಾಪಟ್ಟಣ : ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ವತಿಯಿಂದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ ಶಾಸಕ ಕೆ ಮಹದೇವ್ ಅವರ ಸಮ್ಮುಖದಲ್ಲಿ ತಾಲ್ಲೂಕು ಪಂಚಾಯಿತಿಯ ನೂತನ ವರ್ಷದ ಡೈರಿ ಬಿಡುಗಡೆಗೊಳಿಸಲಾಯ್ತಿತು.
ಶಾಸಕ ಕೆ ಮಹದೇವ್ ಮಾತನಾಡಿ ಸರ್ಕಾರಿ ನೌಕರರಿಗೆ ಈ ಬಾರಿ ತಾಲ್ಲೂಕು ಪಂಚಾಯಿತಿ ವತಿಯಿಂದ ಡೈರಿ ವಿತರಣೆ ಮಾಡುತ್ತಿರುವುದು ಸಂತಸದ ವಿಚಾರ ತಾಲ್ಲೂಕಿನಲ್ಲಿ ಕೃಷ್ಣಕುಮಾರ್ ನೇತೃತ್ವದಲ್ಲಿ ಗ್ರಾಮೀಣ ಭಾಗದ ಸಾಕಷ್ಟು ಕೆಲಸಗಳು ನಡೆದಿದೆ.ಇದರಿಂದ ತಾಲ್ಲೂಕಿಗೆ ಹೆಚ್ಚು ಅಭಿವೃದ್ಧಿ ಪಥದಲ್ಲಿ ನಿಲ್ಲಲು ಸಹಕಾರಿಯಾಗಿದ್ದು ಕೃಷ್ಣಕುಮಾರ್ ಅವರ ಪಾತ್ರ ಬಹುಮುಖ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಳಿಕ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಮಾತನಾಡಿ 2022 ನೂತನ ವರ್ಷ ಎಲ್ಲರಿಗೂ ಒಳ್ಳೆಯದು ಮಾಡಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯವೈಖರಿಗಳು ಸುಗಮವಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ THO ಶರತ್ ಬಾಬು, CDPO ಕುಮಾರ್, BEO YK ತಿಮ್ಮೇಗೌಡ, ಇಂಜಿನಿಯರ್ ಪಾಶ, ತಾಲ್ಲೂಕು ಪಂಚಾಯಿತಿಯ ಸುರೇಶ, ಜೆಡಿಎಸ್ ಮುಖಂಡರುಗಳಾದ ಅಣ್ಣಯ್ಯ ಶೆಟ್ಟಿ, ಟಿ.ಈರಯ್ಯ, ವಿದ್ಯಾಶಂಕರ್ ಹಾಗು ಮತ್ತಿತರರು ಹಾಜರಿದ್ದರು