
ದುಶ್ಚಟದಿಂದ ದೂರವಿದ್ದರೆ ಮಾತ್ರ ಪ್ರತಿಯೊಬ್ಬರೂ ಸಮಾಜದಲ್ಲಿ ಸತ್ಪ್ರಜೆಯಾಗಲು ಸಾಧ್ಯ ಎಂದುಶಾಸಕ ಕೆ.ಮಹದೇವ್ ತಿಳಿಸಿದರು ಪಿರಿಯಾಪಟ್ಟಣ ತಾಲೂಕು ಬೈಲುಕುಪ ಖಾಸಗಿ ಕಲ್ಯಾಣ ಮಂಟಪದ ಅವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಹಾಗೂ ಕೊಪ್ಪ ವಲಯದ ಸಹಯೋಗದಲ್ಲಿ ಆಯೋಜಿಸಿದ್ದು ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮಾತನಾಡಿದ ಅವರು ಮಧ್ಯಪಾನ ಸೇವಿಸಿ ಶ್ರೀಮಂತ ಯುವಕರ ಮೋಜಿಗಾಗಿ ಬಳಕೆಯಾದರೆ ಕೂಲಿಕಾರ್ಮಿಕರ ಕೆಟ್ಟ ಪರಿಣಾಮ ಬೀರುತ್ತದೆ ಎಂದರು ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ ಮದ್ಯಸೇವನೆಯಿಂದ ಮನುಷ್ಯನ ಸೇರಿದಂತೆ ನಿಮ್ಮ ಜೀವನವನ್ನೇ ಸರ್ವನಾಶ ಮಾಡುತ್ತದೆ ಆದ್ದರಿಂದ ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ತಿಳಿ ಹೇಳಿದರು
ಶಿಬಿರದ ಯೋಜನಾಧಿಕಾರಿ ತಿಮ್ಮಯ್ಯ ಜನಜಾಗೃತಿ ವೇದಿಕೆಯ ಪ್ರಮುಖರಾದ ಸೋಮಶೇಖರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿಕೆ ರೇಣುಕಸ್ವಾಮಿ ಕೊಡಗು ಜಿಲ್ಲಾ ನಿರ್ದೇಶಕ ಯೋಗೀಶ್ ದೇವಿಪ್ರಸಾದ್ ಆರೋಗ್ಯ ಸಹಾಯಕ ಅಧ್ಯಕ್ಷ ರಾಜೇಶ್ ಮತ್ತು ಸ್ವಾಮಿ ಸುರೇಶ್ ಶೆಟ್ಟಿ ಕೊಪ್ಪ ವಲಯ ಮೇಲ್ವಿಚಾರಕಿ ಮಧುರ ವಸಂತ ಭಾರತಿ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು