
ವಿದ್ಯಾರ್ಥಿಗಳು ಜೀವನದಲ್ಲಿ ಏಕಾಗ್ರತೆ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳುವುದರ ಮೂಲಕ ತಂದೆತಾಯಿಗಳಿಗೆ ವಿದ್ಯಾಸಂಸ್ಥೆಗೆ ಹೆಸರು ತರಬೇಕು ಎಂದು ಶಾಸಕ ಕೆ ಮಹದೇವ್ ತಿಳಿಸಿದರು. ಪಿರಿಯಾಪಟ್ಟಣದ ಹರವೆ ಮಲ್ಲ ರಾಜ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2 ಕೋಟಿ ರೂ ವೆಚ್ಚದ ಸಭಾಂಗಣ ಮತ್ತು ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆಲವು ಕಡೆ ಚಾಲನೆ ನೀಡಿದ್ದರೂ ಕಟ್ಟಡ ನಿರ್ಮಾಣ ಮಾಡಿರುವುದಿಲ್ಲ ಆದರೆ ನಾನು ಗುದ್ದಲಿಪೂಜೆ ಮಾಡಿರುವ ಎಲ್ಲ ಕಾಮಗಾರಿಗಳು ನಿರ್ಮಾಣವಾಗಿ ನಾನೇ ಉದ್ಘಾಟನೆ ಮಾಡುತ್ತಿರುವುದು ನನ್ನ ಭಾಗ್ಯ.
ಪ್ರಥಮ ದರ್ಜೆ ಕಾಲೇಜಿಗೆ ಈಗಾಗಲೇ ಸಾಕಷ್ಟು ಅನುದಾನ ನೀಡಿದ್ದು ಮುಂದೆಯೂ ಒಂದು ಕೋಟಿ ರೂ ಅನುದಾನ ಮಂಜೂರು ಮಾಡಲಾಗುವುದು ಇದರಲ್ಲಿ ಹೆಚ್ಚುವರಿ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ. ಡಿ. ದೇವರಾಜು ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಉಪಾಧ್ಯಕ್ಷೆ ನಾಗರತ್ನ, ಸದಸ್ಯ ಪಿಸಿ ಕೃಷ್ಣ, ಮಹೇಶ್, ಪ್ರಕಾಶ್ ಸಿಂಗ್, ನಿರಂಜನ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವೇಣುಗೋಪಾಲ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಟಿ ರಾಜು, ಟಿ ಈರಯ್ಯ, ಗೋಪಾಲ್ ಕೃಷ್ಣಾಪುರ, ರಘುನಾಥ್, ನಾಗರಾಜು, ಪ್ರಾಧ್ಯಾಪಕರಾದ ನಾಗಮ್ಮ, ಜಯಂತಿ, ವಿಶ್ವನಾಥ್, ಪುರಸಭೆ ಮುಖ್ಯಾಧಿಕಾರಿ ಪ್ರಸನ್ನ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು