
ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರದ ಸ್ವರ್ಣಾಂಬ ಚಿಟ್ಸ್ ಪ್ರೈವೆಟ್ ಲಿಮಿಟೆಡ್ ನ 2022 ನೇ ವರ್ಷದ ದಿನದರ್ಶಿಕೆ ಡೈರಿ ಅನ್ನು ಶಾಸಕ ಕೆ.ಮಹದೇವ್ ಬಿಡುಗಡೆ ಮಾಡಿದರು. ನಂತರ ಶಾಸಕ ಕೆ.ಮಹದೇವ್ ಅವರು ಮಾತನಾಡಿ ನೂತನ ವರ್ಷದಲ್ಲಿ ಕೊರೋನಾ ಸೋಂಕು ವಿಶ್ವದಾದ್ಯಂತ ಹತೋಟಿಗೆ ಬಂದು ಎಲ್ಲಾ ವರ್ಗದ ಜನರು ಸಂತೋಷದಿಂದ ಬಾಳುವಂತಾಗಲಿ, ಸಕಾಲದಲ್ಲಿ ಮಳೆ ಬೆಳೆಯಾಗಿ ರೈತರ ಬಾಳು ಹಸನಾಗಲಿ, ಕಾರ್ಮಿಕ ವರ್ಗದ ಸಂಕಷ್ಟಗಳು ದೂರವಾಗಿ ಒಳಿತಾಗಲಿ, ಉದ್ಯಮದ ಜೊತೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಜೊತೆಗೆ ಲಾಭಾಂಶದ ಶೇ.25 ಹಣವನ್ನು ಸಮಾಜ ಸೇವೆಗೆ ಉಪಯೋಗಿಸುತ್ತಿರುವ ಸ್ವರ್ಣಾಂಬ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನ ಕುಾರಗಲ್ಲು ಕುಮಾರಸ್ವಾಮಿ ಅವರ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭ ಮಹಾಲಕ್ಷ್ಮಿ ಫೈನಾನ್ಸ್ ಅಧ್ಯಕ್ಷ ಕೂರಗಲ್ಲು ಕುಮಾರಸ್ವಾಮಿ, ಸ್ವರ್ಣಾಂಬ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷೆ ಎಚ್.ಕೆ ಶೋಭಾ, ಸ್ವರ್ಣಾಂಬ ಫೈನಾನ್ಸ್ ನ ಅಧ್ಯಕ್ಷ ಶಿವಕುಮಾರ್, ನಿರ್ದೇಶಕಿ ಕೆ.ಎಸ್ ಸ್ವರ್ಣಾಂಬ, ಬಿಜೆಪಿ ತಾಲ್ಲೂಕು ಯುವ ಮುಖಂಡ ಸುನೀಲ್, ಮುಖಂಡರಾದ ರಘುನಾಥ್, ಪಟೇಲ್ ನಟೇಶ್, ಇಮ್ರಾನ್, ರಘುಗೌಡ ಮತ್ತಿತರಿದ್ದರು.