ತಾಲ್ಲೂಕಿನ ರೈತರು ಸಮಗ್ರ ಕೃಷಿ ಅಭಿಯಾನ ಯೋಜನೆಯ ಸಂಪರ‍್ಣ ಮಾಹಿತಿ ಪಡೆದು ಅಭಿಯಾನದ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ಕನ್ನಂಬಾಡಿಯಮ್ಮ ದೇವಸ್ಥಾನ ಆವರಣ ಬಳಿ ಕೃಷಿ ಇಲಾಖೆ ವತಿಯಿಂದ ರ‍್ಪಡಿಸಿದ್ದ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಅವರುಮಾತನಾಡಿದರು, ರಥವು ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಸಂಚರಿಸಲಿದ್ದು ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸಂಪರ‍್ಣ ಮಾಹಿತಿಯನ್ನು ರೈತರಿಗೆ ತಲುಪಿಸಲಿದೆ, ರೈತರು ತಮ್ಮ ಜಮೀನುಗಳಲ್ಲಿ ಬೆಳೆಯುವ ಬೆಳೆಗಳು ಹಾಗೂ ಉಪ ಕಸುಬುಗಳ ಬಗ್ಗೆ ಮಾಹಿತಿ ಕೊರತೆ ಇದ್ದರೆ ಸ್ಥಳದಲ್ಲಿಯೇ ಮಾಹಿತಿ ಪಡೆಯಬಹುದು ಎಂದರು.
ಕೃಷಿ ಇಲಾಖೆಯ ಸಹಾಯಕ ನರ‍್ದೇಶಕ ಶಿವಕುಮಾರ್ ಮಾತನಾಡಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ನೀಡಲಾಗುತ್ತಿರುವ ವಿವಿಧ ಸವಲತ್ತುಗಳು ಹಾಗೂ ಕೃಷಿಗೆ ಸಂಬಂಧಪಟ್ಟ ಇತರ ಇಲಾಖೆಗಳಿಂದ ನೀಡಲಾಗುತ್ತಿರುವ ಯೋಜನೆಗಳ ಬಗ್ಗೆಯೂ ಮಾಹಿತಿ ಪಡೆಯಬಹುದಾಗಿದೆ ಎಂದರು. ಜೂ.22 ರ ಶನಿವಾರ ಕಸಬಾ ಹೋಬಳಿ, ಜೂ. 24 ಭಾನುವಾರ ಬೆಟ್ಟದ ಪುರ ಮತ್ತು ಜೂ.25 ರ ಮಂಗಳವಾರ ರಾವಂದೂರು ಹೋಬಳಿಗಳಲ್ಲಿ ಕೃಷಿ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದರು
ಈ ಸಂರ‍್ಭದಲ್ಲಿ ತಾಪಂ ಅಧ್ಯಕ್ಷೆ ಕೆ.ಆರ್. ನಿರೂಪ, ಜಿ.ಪಂ. ಸದಸ್ಯ ಕೆ.ಸಿ. ಜಯಕುಮಾರ್, ತಾ.ಪಂ. ಸದಸ್ಯರಾದ ಎಸ್ ರಾಮು, ಎ.ಟಿ. ರಂಗಸ್ವಾಮಿ, ಶ್ರೀನಿವಾಸ್, ಮಲ್ಲಿಕರ‍್ಜುನ, ತಾ.ಪಂ. ಇಒ ಡಿ.ಸಿ. ಶ್ರುತಿ ,ಕೃಷಿ ಅಧಿಕಾರಿ ದಿವಾಕರ್, ಪುರಸಭೆ ಸದಸ್ಯ ಮಹೇಶ್, ಮಾಜಿ ತಾ.ಪಂ ಸದಸ್ಯ ರಘುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top