ತಾಲ್ಲೂಕಿನ ನಂದಿನಾಥಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಅಧಿಕಾರಿಗಳು ಕಚೇರಿಯ ಕೂರದೆ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ರ್ಕಾರದ ಯೋಜನೆಗಳ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ, ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆ ಮತ್ತು ಅರಣ್ಯ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ಅಭಿಯಾನ ಕರ್ಯಕ್ರಮ ಹಮ್ಮಿಕೊಂಡಿದ್ದು ಈ ಎಲ್ಲ ಇಲಾಖೆಗಳ ಸಂಪರ್ಣ ಮಾಹಿತಿಯನ್ನು ರೈತರಿಗೆ ತಲುಪಿಸುವ ರ್ತವ್ಯವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಾಮಾಣಿಕವಾಗಿ ನಡೆಸಬೇಕು, ತಾಲ್ಲೂಕಿನ ರೈತರು ಹೆಚ್ಚಾಗಿ ತಂಬಾಕು ಕೃಷಿಯಲ್ಲಿ ನಿರತರಾಗಿದ್ದು ಸತತ ತಂಬಾಕು ಬೆಳೆಯಿಂದಾಗಿ ಮಣ್ಣಿನ ಸತ್ವ ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು, ತಂಬಾಕಿಗೆ ರ್ಯಾಯ ವಾಣಿಜ್ಯ ಬೆಳೆಯನ್ನು ಅಭಿವೃದ್ಧಿಪಡಿಸಿದಲ್ಲಿ ರೈತರ ರ್ಥಿಕ ಸ್ಥಿತಿ ಉತ್ತಮವಾಗಲಿದೆ ಎಂದರು.
ತಾಲ್ಲೂಕು ಸಹಾಯಕ ಕೃಷಿ ನರ್ದೇಶಕ ಶಿವಕುಮಾರ್ ಮಾತನಾಡಿ ರ್ಕಾರದ ವಿವಿಧ ಇಲಾಖೆಗಳ ಕರ್ಯಕ್ರಮವನ್ನು ಏಕಗವಾಕ್ಷಿಯಲ್ಲಿ ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಮಗ್ರ ಕೃಷಿ ಅಭಿಯಾನ ಹಮ್ಮಿಕೊಂಡಿದ್ದು ವೈಜ್ಞಾನಿಕ ಹಾಗೂ ತಾಂತ್ರಿಕವಾದ ಮಾಹಿತಿಯನ್ನು ರೈತರಿಗೆ ನೀಡುವುದು ಈ ಕರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ, ತಾಲ್ಲೂಕಿನ ನಾಲ್ಕು ಹೋಬಳಿಯ ಗ್ರಾಮ ವ್ಯಾಪ್ತಿಗಳಲ್ಲಿ ಮಾಹಿತಿ ರಥವು ಸಂಚರಿಸಿದ್ದು ರೈತರಿಗೆ ಕರಪತ್ರಗಳ ಮೂಲಕ ವಿವಿಧ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿಯನ್ನು ಅವರ ಮನೆ ಬಾಗಿಲಿಗೆ ನೀಡುವ ಉದ್ದೇಶದಿಂದ ಕರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ತಾ.ಪಂ ಅಧ್ಯಕ್ಷೆ ನಿರೂಪ ಮಾತನಾಡಿ ರೈತರಿಗೆ ರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ರ್ಥಿಕವಾಗಿ ಪ್ರಗತಿ ಹೊಂದುವಂತೆ ತಿಳಿಸಿದರು.
ಇದೇ ಸಂರ್ಭ ವಿವಿಧ ಇಲಾಖೆಗಳ ಉಪಕರಣಗಳ ವಸ್ತು ಪ್ರರ್ಶನ ನಡೆಯಿತು, ಹುಣಸೂರಿನ ಚೈತನ್ಯ ಕಲಾ ತಂಡದವರು ಕೃಷಿ ಅಭಿಯಾನ ಕುರಿತಂತೆ ಬೀದಿ ನಾಟಕ ಪ್ರರ್ಶಿಸಿ ರೈತರಿಗೆ ಅರಿವು ಮೂಡಿಸಿದರು, ಕೃಷಿ ಇಲಾಖೆಯ ರ್ಹ ಫಲಾನುಭವಿಗಳಿಗೆ ವಿವಿಧ ಸಲಕರಣೆಗಳನ್ನು ಶಾಸಕ ಕೆ.ಮಹದೇವ್ ವಿತರಿಸಿದರು.
ತಾ.ಪಂ ಸದಸ್ಯರಾದ ಎಸ್.ರಾಮು, ಟಿ.ಈರಯ್ಯ, ಕೃಷಿ ಅಧಿಕಾರಿ ದಿವಾಕರ್ ಮಾತನಾಡಿದರು.
ಕರ್ಯಕ್ರಮದಲ್ಲಿ ಹುಣಸವಾಡಿ ಗ್ರಾ.ಪಂ ಅಧ್ಯಕ್ಷ ಕುಮಾರ್, ಜಿ.ಪಂ.ಸದಸ್ಯ ಕೆ.ಸಿ. ಜಯಕುಮಾರ್, ತಾ.ಪಂ. ಸದಸ್ಯರಾದ ರಂಗಸ್ವಾಮಿ, ಶ್ರೀನಿವಾಸ್, ಆರ್.ಎಸ್ ಮಹದೇವ್, ಎಪಿಎಂಸಿ ಅಧ್ಯಕ್ಷ ರಾಜಯ್ಯ, ಉಪಾಧ್ಯಕ್ಷ ಮೋಹನ್ ಕುಮಾರ್, ಎಂಡಿಸಿಸಿ ಬ್ಯಾಂಕಿನ ನರ್ದೇಶಕ ಸಿ.ಎನ್ ರವಿ, ನಂದಿನಾಥಪುರ ಪಿಎಸಿಸಿಎಸ್ ಅಧ್ಯಕ್ಷ ಎಚ್.ಡಿ ರಾಜೇಂದ್ರ, ಕೃಷಿ ಅಧಿಕಾರಿ ಮಹೇಶ್, ಪಶು ಇಲಾಖೆ ಸಹಾಯಕ ನರ್ದೇಶಕ ಶ್ರೀನಿವಾಸ್, ತೋಟಗಾರಿಕೆ ಇಲಾಖೆ ನರ್ದೇಶಕ ಸೋಮಯ್ಯ, ಮೀನುಗಾರಿಕೆ ಇಲಾಖೆ ನರ್ದೇಶಕ ನಿರಂಜನ್, ರೇಷ್ಮೆ ಇಲಾಖೆ ನರ್ದೇಶಕ ಸಿದ್ದರಾಜ್, ಗ್ರಾಮದ ಮುಖಂಡರು ಹಾಜರಿದ್ದರು.
ಕರ್ಯಕ್ರಮಕ್ಕೂ ಮೊದಲು ವಿವಿಧ ಇಲಾಖೆಗಳ ಮಾಹಿತಿ ನೀಡುವ ಮಳಿಗೆಗಳು ಹಾಗೂ ವಿವಿಧ ಕೃಷಿ ಉಪಕರಣಗಳ ವಸ್ತು ಪ್ರರ್ಶನವನ್ನು ಶಾಸಕ ಕೆ.ಮಹದೇವ್ ಉದ್ಘಾಟಿಸಿದರು.