ಜಾತಿ ಭೇದಭಾವ ಎಂಬ ಕೆಟ್ಟ ಸಂಪ್ರದಾಯದಿಂದ ಹೊರ ಬಂದು ಎಲ್ಲರೂ ಸಮಾನತೆಯಿಂದ ಸಹಬಾಳ್ವೆಯ ಜೀವನ ನಡೆಸುವಂತೆ ಶಾಸಕ ಕೆ.ಮಹದೇವ್ ಕರೆ ನೀಡಿದರು.

ತಾಲೂಕಿನ ರಾವಂದೂರಿನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಾಗೂ ದಲಿತ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಸ್ಪೃಶ್ಯತಾ ನರ‍್ಮೂಲನಾ ಜಾಗೃತಿ ಕಮ್ಮಟ ಮತ್ತುಅರಿವು ಸಪ್ತಾಹ ಕರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಸಮಾಜದ ಕೆಲವೆಡೆ ಇನ್ನೂ ಜಾತಿ ಪದ್ಧತಿ, ಅಸ್ಪೃಶ್ಯತೆ ಆಚರಣೆಯಲ್ಲಿರುವುದು ವಿಷಾದಕರ ಸಂಗತಿ, ಸಮಾಜದಲ್ಲಿ ಆಚರಣೆಯಲ್ಲಿರುವ ಇಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ ನಾವೆಲ್ಲರೂ ಒಂದೇ ನಾವೆಲ್ಲರೂ ಸರಿ ಸಮಾನರು ಎಂಬ ಘೋಷ ವಾಕ್ಯದಡಿ ಸಹಬಾಳ್ವೆಯಿಂದ ಸಹೋದರತೆಯಿಂದ ಬಾಳುವಂತೆ ತಿಳಿಸಿದರು. ಇತ್ತೀಚೆಗೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಹಿಂದುಳಿದ ರ‍್ಗದ ವ್ಯಕ್ತಿಯರ‍್ವನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದರು, ನಮ್ಮ ತಾಲ್ಲೂಕಿನ ಜನತೆ ಶಾಂತಿ ಪ್ರಿಯರಾಗಿದ್ದು ಉತ್ತಮ ಸಮಾಜ ನರ‍್ಮಿಸಿ ಎಲ್ಲರೂ ಸಹಬಾಳ್ವೆಯಿಂದ ಬಾಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಎಎಸ್ಐ ಪುಟ್ಟರಾಜು, ಉಪನ್ಯಾಸಕ ಪುಟ್ಟಮಾದಯ್ಯ, ಮುಖಂಡ ನಿಂಗರಾಜ್ ಅಸ್ಪೃಶ್ಯತೆ ನರ‍್ಮೂಲನೆ ಜಾಗೃತಿ ಕುರಿತು ಜನರಿಗೆ ಅರಿವು ಮೂಡಿಸುವ ಬಗ್ಗೆ ಮಾತನಾಡಿದರು.
ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ದಸಂಸ ಮುಖಂಡ ಚಾಮರಾಯನಕೋಟೆ ಜಗದೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನರ‍್ದೇಶಕ ರಾಮೇಗೌಡ ಮಾತನಾಡಿದರು.
ಕರ‍್ಯಕ್ರಮದಲ್ಲಿ ರಾವಂದೂರು ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ, ತಾ.ಪಂ ಅಧ್ಯಕ್ಷೆ ನಿರೂಪ, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಮಲ್ಲಿಕರ‍್ಜುನ್, ಪಂಕಜ, ಜಿಪಂ ಸದಸ್ಯೆ ಕೌಸಲ್ಯ, ತಾ.ಪಂ ಇಒ ಡಿ.ಸಿ ಶ್ರುತಿ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಮುಖಂಡರುಗಳಾದ ಅಣ್ಣಯಶೆಟ್ಟಿ, ಅಪ್ಪಾಜಿಗೌಡ, ಆರ್.ಎಲ್ ಮಣಿ, ಚಾಮರಾಯನ ಕೋಟೆ ಜಗದೀಶ್, ರಾಜಯ್ಯ, ನಂದೀಶ್, ರಘುನಾಥ್, ಶಿವಣ್ಣ, ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ರ‍್ಕಾರಿ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕರ‍್ಯರ‍್ತೆಯರು, ಬಿಸಿಯೂಟ ಸಿಬ್ಬಂದಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top