ಪಟ್ಟಣದ ಸರ್ವಜನಿಕ ಆಸ್ಪತ್ರೆಗೆ ಸೋಮವಾರ ಸಂಜೆ ಭೇಟಿ ನೀಡಿ ವೈದ್ಯರು ಹಾಗೂ ಸಿಬ್ಬಂದಿಗಳ ಸಭೆ ನಡೆಸಿ ಅವರುಮಾತನಾಡಿದರು, ವೈದ್ಯರನ್ನು ದೇವರ ಸಮಾನವೆಂದು ಜನಸಾಮಾನ್ಯರು ಕಾಣುತ್ತಾರೆ ಇದನ್ನು ಉಳಿಸಿಕೊಳ್ಳಬೇಕೆಂದರೆ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಇದರಿಂದ ಜನರ ಹಾರೈಕೆ ನಿಮ್ಮನ್ನು ಕಾಪಾಡಲಿದೆ, ತಜ್ಞ ವೈದ್ಯರು ತಿಂಗಳಿಗೆ ಸುಮಾರು 1.25 ಲಕ್ಷದಿಂದ 2 ಲಕ್ಷದವರೆಗೂ ಸಂಬಳ ಪಡೆಯುತ್ತಾರೆ ಈ ಭಾರಿ ಮೊತ್ತದ ಸಂಬಳದ ಪಡೆಯುವ ಕಾರಣಕ್ಕಾಗಿಯಾದರೂ ಉತ್ತಮವಾಗಿ ಕೆಲಸ ಮಾಡಿ ಇದು ನನ್ನ ಮನವಿ ಎಂದರು, ಜನರು ಪ್ರತಿಯೊಂದು ಸಮಸ್ಯೆಗೂ ನನ್ನನ್ನು ಸಂರ್ಕಿಸುತ್ತಾರೆ ಆದರೆ ಆರೋಗ್ಯದ ಸಮಸ್ಯೆಗೆ ನನ್ನನ್ನು ಸಂರ್ಕಿಸದಂತೆ ನಡೆದುಕೊಳ್ಳುವುದು ವೈದ್ಯರ ಜವಾಬ್ದಾರಿ, ವೈದ್ಯರು ಸಮಯ ಪರಿಪಾಲನೆಯನ್ನು ಕಟ್ಟನಿಟ್ಟಾಗಿ ಪಾಲಿಸಿ ನಾನು ಯಾವ ಸಮಯದಲ್ಲಾದರೂ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಪರಿಶೀಲಿಸುತ್ತೇನೆ ಆ ಸಮಯದಲ್ಲಿ ವೈದ್ಯರು ರ್ತವ್ಯದಲ್ಲಿರಬೇಕು ಎಂದು ಎಚ್ಚರಿಕೆ ನೀಡಿದರು, ವೈದ್ಯರು ಹೆಚ್ಚಿನ ಚಿಕಿತ್ಸೆ ನೆಪದಲ್ಲಿ ಮೈಸೂರಿಗೆ ಕಳುಹಿಸುವ ಪ್ರವೃತ್ತಿಯನ್ನು ಕೈಬಿಟ್ಟು ಸಾಧ್ಯವಾದಷ್ಟು ಇಲ್ಲೇ ಚಿಕಿತ್ಸೆ ನೀಡಿದರೆ ಬಡಜನರ ಕಷ್ಟ ನಿವಾರಣೆಯಾಗಲಿದೆ ಎಂದರು.
ಡಿಎಚ್ಓ ಡಾ.ವೆಂಕಟೇಶ್ ಮಾತನಾಡಿ ಆಸ್ಪತ್ರೆಯ ಮೂಲಭೂತ ಸೌಲಭ್ಯ ಕೊರತೆಯಿಲ್ಲ ಆದರೆ ವೈದ್ಯರು ಸಮಯಕ್ಕೆ ಸರಿಯಾಗಿ ಆಗಮಿಸುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ ಇದನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು, ಆಸ್ಪತ್ರೆಯಲ್ಲಿ ಪೊಲೀಸ್ ಚೌಕಿ ಸ್ಥಾಪನೆಗೆ ಕ್ರಮಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದರು.
ಸರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ ಶವಾಗಾರದ ಕಟ್ಟಡ ಶಿಥಿಲಗೊಂಡಿದ್ದು ಹೊಸ ಕಟ್ಟಡ ನರ್ಮಾಣ, ಡಿಜಿಟಲ್ ಎಕ್ಸರೆ ಯಂತ್ರ ಅಗತ್ಯ, ಆಸ್ಪತ್ರೆ ಮೇಲ್ಚಾಚಣಿ ದುರಸ್ತಿ, ಡಯಾಲಿಸಿಸ್ ಘಟಕ್ಕೆ ಜನರೇಟರ್, ಹೆಚ್ಚುವರಿ ಆಂಬುಲೆನ್ಸ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಈ ಸಂರ್ಭದಲ್ಲಿ ಟಿಎಚ್ಓ ಡಾ.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಪುಟ್ಟರಾಜು, ಸದಸ್ಯರಾದ ಪಿ.ಸಿ.ಕೃಷ್ಣ, ಪ್ರಕಾಶ್ ಸಿಂಗ್, ನಿರಂಜನ್, ವೈದ್ಯರಾದ ಡಾ.ಶ್ರೀನಿವಾಸ್, ಡಾ.ಶಿವಪ್ರಕಾಶ್, ಡಾ.ಮಹದೇವಸ್ವಾಮಿ, ಡಾ.ಸದಾಶಿವ, ಡಾ.ಅನಿಲ್, ಡಾ.ಅನಿಲ್, ಡಾ.ತ್ರಿವೇಣಿ, ಡಾ.ದೇವಿಕಾ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಹಾಜರಿದ್ದರು.