ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಡೆದ ಹಾರನಹಳ್ಳಿ ಹೋಬಳಿಯ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ

ಶಾಸಕ ಕೆ.ಮಹದೇವ್ ಮಾತನಾಡಿ ಸಮಗ್ರ ಕೃಷಿ ಅಭಿಯಾನ ಯೋಜನೆಯಡಿ ಕೃಷಿ, ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೆ ಒದಗಿಸುತ್ತಿರುವುದು ಸಂತೋಷಕರ ಬೆಳವಣಿಗೆಯಾಗಿದ್ದು, ರೈತರು ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ರ‍್ಥಿಕವಾಗಿ ಮುಂದುವರಿಯುವಂತೆ ತಿಳಿಸಿದರು, ಬೆಳೆ ಹಾನಿ ಸಂರ‍್ಭಗಳಲ್ಲಿ ಧೃತಿಗೆಡದೆ ಆತ್ಮಹತ್ಯೆಯಂತಹ ದಾರಿಯನ್ನು ತುಳಿಯದೆ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸುವಂತೆ ರೈತರಲ್ಲಿ ಮನವಿ ಮಾಡಿದರು.

ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಡೆದ ಹಾರನಹಳ್ಳಿ ಹೋಬಳಿಯ ಸಮಗ್ರ ಕೃಷಿ ಅಭಿಯಾನ ಕರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ರೈತರು ನಷ್ಟದ ಭೀತಿಯಲ್ಲಿದ್ದಾರೆ, ರೈತರುಗಳಿಗೆ ಕೃಷಿ ಇಲಾಖೆ ವತಿಯಿಂದ ವಾತಾವರಣಕ್ಕೆ ತಕ್ಕಂತೆ ಬೆಳೆ ಬೆಳೆಯಲು ಸೂಕ್ತ ಮಾಹಿತಿ ನೀಡಲಾಗುತ್ತಿದ್ದು, ರಸಗೊಬ್ಬರ, ಲಘು ಪೋಷಕಾಂಶ, ದ್ವಿದಳ ಧಾನ್ಯಗಳು, ಹಾಗೂ ಯಂತ್ರೋಪಕರಣಗಳು ಸೇರಿದಂತೆ ರ‍್ಕಾರದ ವಿವಿಧ ಸವಲತ್ತುಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ, ರೈತರುಗಳು ತಮ್ಮ ಬೆಳೆಗಳನ್ನು ಬೆಳೆಯಲು ಮಾಹಿತಿ ಕೊರತೆ ಇದ್ದರೆ ಇಲಾಖೆ ಅಧಿಕಾರಿಗಳನ್ನು ಸಂರ‍್ಕಿಸುವಂತೆ ತಿಳಿಸಿದರು.


ಇದೇ ವೇಳೆ ರ‍್ಕಾರದಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವ ಪ್ರೋತ್ಸಾಹ ಧನದ ಚೆಕ್ಕನ್ನು ಶಾಸಕ ಕೆ.ಮಹದೇವ್ ವಿತರಿಸಿದರು, ಕರ‍್ಯಕ್ರಮದ ಅಂಗವಾಗಿ ವಿವಿಧ ಇಲಾಖೆಗಳ ವಸ್ತು ಪ್ರರ‍್ಶನ ಹಾಗೂ ಮಾಹಿತಿ ಮಳಿಗೆಗಳು ತೆರೆದಿದ್ದವು.
ಕರ‍್ಯಕ್ರಮದಲ್ಲಿ ಹುಣಸೂರು ವಿಭಾಗದ ಉಪ ಕೃಷಿ ನರ‍್ದೇಶಕ ಧನಂಜಯ್, ತಾಲ್ಲೂಕು ಕೃಷಿ ಸಹಾಯಕ ನರ‍್ದೇಶಕ ಶಿವಕುಮಾರ್, ಕೃಷಿ ಅಧಿಕಾರಿಗಳಾದ ಮಹೇಶ್, ವಿಕಾಸ್, ಹಿತೇಶ್, ತೋಟಗಾರಿಕೆ ಇಲಾಖೆ ನರ‍್ದೇಶಕ ಸೋಮಯ್ಯ, ರೇಷ್ಮೆ ಇಲಾಖೆ ನರ‍್ದೇಶಕ ಸಿದ್ದರಾಜ್, ಉಪ ತಹಸೀಲ್ದಾರ್ ನಿಜಾಮುದ್ದೀನ್, ಕಂದಾಯ ಅಧಿಕಾರಿ ಮಹೇಶ್, ಪಶು ಸಂಗೋಪನೆ ಇಲಾಖೆ ಹಾಗೂ ಕೃಷಿ ಅಧಿಕಾರಿಗಳು, ತಾ.ಪಂ ಸದಸ್ಯರಾದ ಸುಮಿತ್ರಾ, ಪುಷ್ಪಲತಾ, ಮೋಹನ್ ರಾಜ್, ಜಯಂತಿ, ಶೋಭಾ, ಗ್ರಾ.ಪಂ ಅಧ್ಯಕ್ಷರುಗಳಾದ ಸಣ್ಣಯ್ಯ, ಲತಾ, ಲೋಕೇಶ್, ಉಪಾಧ್ಯಕ್ಷೆ ಯಶೋಧಮ್ಮ, ಸದಸ್ಯರಾದ ವಿದ್ಯಾಶಂಕರ್, ಷಣ್ಮುಖ್, ಎಪಿಎಂಸಿ ಸದಸ್ಯ ಮಹದೇವ್, ಮುಖಂಡರುಗಳಾದ ಕೆಂಪೇಗೌಡ, ಮೈಲಾರಪ್ಪ, ಗೋವಿಂದೇಗೌಡ, ಹೇಮಂತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top