
ಪಟ್ಟಣದ ಕನ್ನಂಬಾಡಿಯಮ್ಮ ಸಮುದಾಯ ಭವನದಲ್ಲಿ ಸಾವಿತ್ರಿಬಾಯಿ ಪುಲೆ ತಾಲ್ಲೂಕು ಸಂಘ ವತಿಯಿಂದ ಸಾವಿತ್ರಿಬಾಯಿ ಪುಲೆ ಜಯಂತಿ ಅಂಗವಾಗಿ ನಡೆದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಉತ್ತಮ ಶಿಕ್ಷಕಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿ ಸಮಾಜದಲ್ಲಿ ಬದಲಾವಣೆ ಮಾಡಿದ ಕೀರ್ತಿ ಸಾವಿತ್ರಿಬಾಯಿ ಪುಲೆ ಅವರಿಗೆ ಸಲ್ಲುತ್ತದೆ, ತಾಲ್ಲೂಕು ಸಂಘದ ಅಭಿವದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಹೊಳೆನರಸೀಪುರದ ಕಾನೂನು ಕಾಲೇಜು ಉಪನ್ಯಾಸಕಿ ವಕೀಲೆ ಶ್ರೀಲಕ್ಷ್ಮಿ ಅವರು ಮಾತನಾಡಿ ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಕಲಿಸುವ ಮೂಲಕ ಅಕ್ಷರ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಪುಲೆ ಹಾಗೂ ಅವರ ಪತಿ ಜ್ಯೋತಿ ಬಾಪುಲೆರವರ ಸೇವೆ ಇಂದಿಗೂ ಅವಿಸ್ಮರಣೀಯ, ಶಿಕ್ಷಣ ಎಂಬುದು ಕೇವಲ ಉಳ್ಳವರ ಸ್ವತ್ತಾಗಿದ್ದ ಕಾಲಘಟ್ಟದಲ್ಲಿ ಹಿಂದುಳಿದವರು ಹಾಗೂ ಹೆಣ್ಣುಮಕ್ಕಳಿಗೆ ಇಂಗ್ಲೀಷ್ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆ ತಂದರು, ಬ್ರಿಟೀಷರ ಒತ್ತಡಕ್ಕೆ ಮಣಿಯದೆ ಅಕ್ಷರ ನೀಡುವ ಮೂಲಕ ಸಮಾಜವನ್ನು ಸಂಘಟಿಸುವ ಮತ್ತು ಸುಶಿಕ್ಷತರನ್ನಾಗಿ ಮಾಡುವ ಕೆಲಸ ಮಾಡಿದರು ಎಂದರು.
ಸಾವಿತ್ರಿಬಾಯಿ ಪುಲೆ ಸಂಘದ ಮಂಡ್ಯ ಜಿಲ್ಲಾಧ್ಯಕ್ಷೆ ಎಚ್.ವೈ ಸರಸ್ವತಿ ಅವರು ಮಾತನಾಡಿ ರಾಜ್ಯ ಶಿಕ್ಷಕರ ಸಂಘದಲ್ಲಿ ಪುರುಷರಷ್ಟೇ ಸಮನಾಗಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ಹುದ್ದೆ ನೀಡಬೇಕು, ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ಮೂಲಭೂತ ಸವಲತ್ತುಗಳು ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ತಾಲ್ಲೂಕಿನ ಹಲವೆಡೆಯ ಉತ್ತಮ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು, ಬಿಇಒ ವೈ.ಕೆ ತಿಮ್ಮೇಗೌಡ, ಸಂಘದ ತಾಲ್ಲೂಕು ಅಧ್ಯಕ್ಷೆ ಗಾಯತ್ರಿ ಮಾತನಾಡಿದರು.
ಈ ಸಂದರ್ಭ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಲ್ವಿಯಾ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಮುಖಂಡರಾದ ಸೋಮಶೇಖರ್, ಸಚ್ಚಿದಾನಂದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಗಣೇಶ್ ಕುಮಾರ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಈ.ಬಿ ವೆಂಕಟೇಶ್, ರಾಜ್ ಕುಮಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಮೇರಿಸ್ಟೆಲ್ಲಾ, ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ಕುಮಾರ್, ಸಾವಿತ್ರಿಬಾಯಿ ಪುಲೆ ಸಂಘದ ಜಿಲ್ಲೆಯ ವಿವಿಧೆಡೆಯ ಅಧ್ಯಕ್ಷರಾದ ಕೌಸಲ್ಯ, ಲಲಿತಾ, ಮಮತಾ, ಹೊನ್ನಮ್ಮ, ತಾಲ್ಲೂಕು ಸಂಘದ ಗೌರವಾಧ್ಯಕ್ಷೆ ಜಯಂತಿ, ಉಪಾಧ್ಯಕ್ಷರಾದ ಜಯಲಕ್ಷ್ಮಿ , ಮಹದೇವಮ್ಮ, ಶೈಲಜಾ, ಮಂಜುಳಾ, ಸಂಘಟನಾ ಕಾರ್ಯದರ್ಶಿ ಹೇಮಲತಾ, ಶಿಲ್ಪ, ನಿರ್ಮಲ, ಜಯಶ್ರೀ, ರಫಿಯಾ ಬಾನು, ಮೇರಿ ವಿಲ್ಫ್ರೆಡ್, ಸಹ ಕಾರ್ಯದರ್ಶಿ ಮಂಜುಳಾ, ಶಿಲ್ಪಾ, ಸೇರಿದಂತೆ ಸಂಘದ ಸದಸ್ಯರು ಹಾಗೂ ತಾಲ್ಲೂಕಿನ ವಿವಿಧೆಡೆಯ ಶಿಕ್ಷಕಿಯರು ಹಾಜರಿದ್ದರು.