ತಾಲೂಕಿನ ಚಿಟ್ಟೇನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮುದಾಯ ಕಾಲೋನಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನರ‍್ಮಾಣ ಹಾಗೂ ಗ್ರಾಮ ಪರಿಮಿತಿ ರಸ್ತೆ ಮತ್ತು ಚರಂಡಿ ನರ‍್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು, ಗುತ್ತಿಗೆದಾರರು ಕಾಮಗಾರಿಗಳನ್ನು ಬೇಗ ಮುಗಿಸುವ ಉದ್ದೇಶದಿಂದ ತರಾತುರಿಯ ಕೆಲಸಕ್ಕೆ ಆದ್ಯತೆ ನೀಡುವುದರಿಂದ ಕಾಮಗಾರಿಗಳು ಅವಧಿಗಿಂತಲೂ ಮುಂಚೆಯೇ ಹಾಳಾಗುವುದರಿಂದ ಸರ‍್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಉತ್ತಮ ಕೆಲಸ ನರ‍್ವಹಿಸುವವರಿಗೆ ಆದ್ಯತೆ ನೀಡಬೇಕು ಎಂದರು, ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು ಮೂಲಭೂತ ಸೌರ‍್ಯ ಕೊರತೆಗಳನ್ನು ಹಂತ ಹಂತವಾಗಿ ಆದ್ಯತೆಗನುಸಾರ ಬಗೆಹರಿಸುವ ಭರವಸೆ ನೀಡಿದರು.
ಕರ‍್ಯಕ್ರಮದಲ್ಲಿ ಜಿ.ಪಂ ಸದಸ್ಯ ರಾಜೇಂದ್ರ, ಎಂಡಿಸಿಸಿ ಬ್ಯಾಂಕ್ ನರ‍್ದೇಶಕ ಸಿ.ಎನ್ ರವಿ, ಚಿಟ್ಟೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಜಯಮ್ಮ, ತಾ.ಪಂ ಸದಸ್ಯ ರಂಗಸ್ವಾಮಿ, ಮಾಜಿ ಸದಸ್ಯರಾದ ಶೈಲಜಾ ರವಿ, ರಘುನಾಥ್, ಮುಖಂಡರುಗಳಾದ ಲೋಕೇಶ್, ಯತಿರಾಜೇಗೌಡ, ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.