ತಾಲ್ಲೂಕಿನ ಮುಳಸೋಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ತಾಲ್ಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ಬುಧವಾರ ನಡೆಸಿದ ಅವರು ನಾನು ಶಾಸಕನಾಗಿ 1 ರ್ಷವಾಗಿದೆ ಇಲ್ಲಿಯವರೆಗೂ ಈ ಯೋಜನೆಯ ಗುತ್ತಿಗೆದಾರರ ನನ್ನನ್ನು ಸೌಜನ್ಯಕ್ಕಾದರೂ ಭೇಟಿ ಮಾಡಿಲ್ಲ ಮತ್ತು ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಮುಗಿಸ ಬೇಕಿತ್ತು ಆದರೆ 18 ತಿಂಗಳುಗಳು ಕಳೆದರೂ ಕಾಮಗಾರಿ ಪರ್ಣಗೊಳಿಸಿಲ್ಲವೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಇಇ ಆನಂತ್ ಪ್ರಸಾದ್ ಸ್ಪಷ್ಠನೆ ನೀಡಿ ಗುತ್ತಿಗೆದಾರ ಈಗಾಗಲೇ 97 ಕೋಟಿ ವೆಚ್ಚದಷ್ಟು ಕಾಮಗಾರಿ ಮಾಡಿದ್ದಾರೆ ಅದರಲ್ಲಿ ಪೈಪ್ಗಳು, ಕಬ್ಬಿಣ ಮತ್ತಿತರ ಅಗತ್ಯ ವಸ್ತುಗಳ ಖರೀದಿ ಸಹ ಸೇರಿದೆ ಎಂದು ತಿಳಿಸಿದರಾದರೂ ಅದಕ್ಕೆ ಸಮಾಧಾನಗೊಳ್ಳದ ಶಾಸಕ ಕೆ.ಮಹದೇವ್ ಗುತ್ತಿಗೆ ಕರಾರು ಅವಧಿ ಮುಗಿದ ನಂತರ ಯೋಜನಾ ವೆಚ್ಚ ಹೆಚ್ಚಾಗಿದೆ ಎಂದು ಶೇ.10 ರಿಂದ 20 ರಷ್ಟು ಹಣ ಹೆಚ್ಚುವರಿಯಾಗಿ ಬಿಡುಗಡೆ ಮಾಡಿಸುವ ಹುನ್ನಾರ ನಡೆಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ರ್ಕಾರಕ್ಕೆ ಶಿಫಾರಸ್ಸು ಮಾಡಿ ಎಂದು ಸೂಚಿಸಿದರು.
ಈ ಸಂರ್ಭದಲ್ಲಿ ಜಿ.ಪಂ.ಸದಸ್ಯ ವಿ.ರಾಜೇಂದ್ರ, ತಾ.ಪಂ.ಸದಸ್ಯ ಎಸ್.ರಾಮು, ಕಾವೇರಿ ನೀರಾವರಿ ನಿಗಮದ ಎಇಗಳಾದ ಮಹಮ್ಮದ್ ಖಲೀಂ, ರಮೇಶ್, ಪುರಸಭೆ ಸದಸ್ಯರಾದ ಪಿ.ಸಿ.ಕೃಷ್ಣ, ನಿರಂಜನ್, ಮುಖಂಡರಾದ ಸೋಮಶೇಖರ್, ಶಿವಣ್ಣ ಮತ್ತಿತರರು ಹಾಜರಿದ್ದರು.
03ಪಿವೈಪಿ02:ಪಿರಿಯಾಪಟ್ಟಣ ತಾಲ್ಲೂಕಿನ ಕೆರೆಗಳಿಗೆ ತಾಲ್ಲೂಕಿನ ಮುಳಸೋಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ಶಾಸಕ ಕೆ.ಮಹದೇವ್ ಬುಧವಾರ ನಡೆಸಿದರು.