ಭಾನುವಾರದಂದು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಮನಾಥತುಂಗ ಗ್ರಾಮದಲ್ಲಿ ಅವರು ಮಾತನಾಡಿದರು, ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿನ ಸಾರ್ವಜನಿಕರು ಮೂಲಭೂತ ಸೌಕರ್ಯ ಕೊರತೆ ನಿವಾರಣೆ ಬಗ್ಗೆ ಮನವಿ ಸಲ್ಲಿಸಿದ್ದನ್ನು ಮನಗಂಡು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಹಂತ ಹಂತವಾಗಿ ಪರಿಹಾರ ದೊರಕಿಸಿದ್ದೇನೆ, ಮುಂದಿನ ದಿನಗಳಲ್ಲಿಯೂ ತಾಲೂಕಿನಾದ್ಯಂತ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡು ಉತ್ತಮ ಜನಪರ ಆಡಳಿತ ನೀಡುವ ಭರವಸೆ ನೀಡಿದರು.
ರಾಮನಾಥತುಂಗ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಕಾಲೊನಿಯಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ, ದೊರೆಕೆರೆ ಗ್ರಾಮದಲ್ಲಿ ಬಾಬು ಜಗಜೀವನ ರಾಮ್ ಭವನ ಉದ್ಘಾಟನೆ, ಕೆಳಗನಹಳ್ಳಿ ಗ್ರಾಮದ ಏತ ನೀರಾವರಿ ಯೋಜನೆಯ ವಿತರಣಾ ನಾಲೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಬಾಕ್ಸ್ ಡ್ರೈನ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು, ಈ ವೇಳೆ ಗ್ರಾಮಸ್ಥರುಗಳು ಸಾರಿಗೆ ಸೌಲಭ್ಯ, ಸಮುದಾಯ ಭವನಗಳ ನಿರ್ಮಾಣ, ಮಹಿಳಾ ಸ್ವಸಹಾಯ ಸಂಘಗಳಿಗೆ ಕಟ್ಟಡ ನಿರ್ಮಾಣ, ಸರ್ಕಾರಿ ಜಾಗಗಳ ಒತ್ತುವರಿ ತೆರವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.
ಈ ಸಂದರ್ಭ ತಾ.ಪಂ ಸದಸ್ಯ ಆರ್.ಎಸ್ ಮಹದೇವ್, ಮಾಜಿ ಜಿ.ಪಂ ಸದಸ್ಯ ಶಿವಣ್ಣ, ಮಾಜಿ ತಾ.ಪಂ ಅಧ್ಯಕ್ಷ ರಾಜೇಗೌಡ, ಗ್ರಾ.ಪಂ ಸದಸ್ಯ ಶಿವು, ಮುಖಂಡರುಗಳಾದ ಬೋರೇಗೌಡ, ಮಂಜುನಾಥ್, ಶಿವು, ಪುನೀತ್, ದೊರೆಕೆರೆ ನಾಗೇಂದ್ರ, ಮಹದೇವ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರುಗಳು ಹಾಜರಿದ್ದರು.