
ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿ ಗ್ರಾಮದಲ್ಲಿ ಸ.ಹಿ.ಪ್ರ ಶಾಲೆ ಭುವನಹಳ್ಳಿ, ಕೊಣಸೂರು, ತೆಳಗಿನಕುಪ್ಪೆ ಬೆಕ್ಕರ್ ಭುವನಹಳ್ಳಿ ಸಹಪ್ರಾಯೋಜಕತ್ವದಲ್ಲಿ ನಡೆದ ಬೆಟ್ಟದಪುರ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಸ್ಪರ್ಧೆಯಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ, ಗೆದ್ದಾಗ ಸಂಭ್ರಮಿಸದೆ ಸೋತಾಗ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಕ್ರೀಡಾಸ್ಫೂರ್ತಿ ಮೆರೆದಾಗ ಮಾತ್ರ ಯಶಸ್ಸಿನ ಗುರಿ ತಲುಪಬಹುದು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಮತ್ತಷ್ಟು ಹೆಚ್ಚಿನ ತರಬೇತಿಯೊಂದಿಗೆ ಮುಂದಿನ ಹಂತಗಳ ಕ್ರೀಡಾಕೂಟಗಳಲ್ಲೂ ಜಯಗಳಿಸಿ ತಾಲ್ಲೂಕಿಗೆ ಹೆಮ್ಮೆ ತರಬೇಕು ಎಂದು ಶುಭಕೋರಿದರು.
ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು, ವಿವಿಧ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು ಹಾಜರಿದ್ದರು.