
ಪಟ್ಟಣದ ಅಂಜುಮಾನ್ ಹುಸೇನಿಯಾ ಮಸೀದಿ ಗೆ ಶಾಸಕ ಕೆ ಮಹದೇವ್ ಭೇಟಿ ನೀಡಿ ಬಾಬಯ್ಯನ ದರ್ಶನ ಪಡೆದರು, ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಇದು ಒಳ್ಳೆಯ ಉದಾಹರಣೆಯಾಗಿದೆ, ಮೊಹರಂ ಹಬ್ಬದ ಆಚರಣೆ ಅಲ್ಲ ಅದು ದುಃಖ ತ್ಯಾಗ ಬಲಿದಾನಗಳನ್ನು ಸಾರುವ ಸಂದೇಶವಾಗಿದೆ ಎಂದು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಮಹದೇವ್ ರವರು ತಿಳಿಸಿದರು. ಇದೇ ವೇಳೆ ಬಾಬಯ್ಯಗೆ ಪೂಜೆ ಮಾಡುವ ಮೂಲಕ ಭಕ್ತಿಯಿಂದ ಅವರ ಜ್ಞಾನವನ್ನು ಮಾಡಲಾಯಿತು ಇದೇ ಸಂದರ್ಭ ಪುರಸಭಾ ಅಧ್ಯಕ್ಷ ಕೆ.ಮಹೇಶ್ ತಾಲ್ಲೂಕಿನ ಶಿಯಾ ಮುಸ್ಲಿಮ್ ಬಾಂಧವರು ಹಾಗೂ ಮುಖಂಡರು ಗಣ್ಯ ವ್ಯಕ್ತಿಗಳು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.