ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯ ಯಂತ್ರಗಾರಕ್ಕೆ ಚಾಲನೆ.

ಪಿರಿಯಾಪಟ್ಟಣ :ತಾಲ್ಲೂಕಿನ ಗಡಿ  ಭಾಗದ ರೈತರಿಗೆ ಭತ್ತ ಬೆಳೆಯಲು ಅನುಕೂಲವಾಗಲೆಂದು ಮೂವತ್ತು ಸಾವಿರ ಎಕರೆ ಜಮೀನಿಗೆ ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯ ನೀರು ಹರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ಸಮೀಪದ ಚನ್ನಕೇಶವಪುರ ಗ್ರಾಮದ ಕನ್ನಡ ಲಕ್ಕನ ಕೆರೆ ಏತ ನೀರಾವರಿ 2022 -23 ನೇ ಸಾಲಿನ ಯಂತ್ರಗಾರಕ್ಕೆ ಶುಕ್ರವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಯಂತ್ರದ ಲೋಪದೋಷದಿಂದ ತಡವಾಗಿ ನಾಲೆಗಳಿಗೆ ನೀರು ಬಿಡಲಾಗಿದೆ, ನಾಲೆಯಲ್ಲಿ ನೀರು ಬರುವುದರಿಂದ ರೈತಾಪಿ ವರ್ಗದವರಿಗೆ 2ಬೆಳೆಗಳನ್ನು ಮಾಡಲು ಅನುಕೂಲವಾಗುತ್ತದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ರೈತರಿಗೆ ಸಲಹೆ ನೀಡಿದರು. ಇದಲ್ಲದೆ ಯಂತ್ರೋಪಕರಣಗಳ ಸಮಸ್ಯೆ ಇನ್ನು ಮುಂದೆ ಉಲ್ಬಣಿಸದಂತೆ ನೋಡಿಕೊಳ್ಳುವ ಉದ್ದೇಶದಿಂದ 

ನಾಲೆ ಹಾಗೂ ಯಂತ್ರೋಪಕರಣಗಳ ನವೀಕರಣ ಮಾಡಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದಲೂ ಅನುಮತಿ ದೊರೆತಿದ್ದು ಮುಂದಿನ ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಸುಂದರ್, ಹನುಮಂತು, ದೊಡ್ಡನೇರಳೆ ಅಪ್ಪಾಜಿಗೌಡ, ಮಹದೇವ್, ಮೈಲಾರಪ್ಪ,ನಂದೀಶ್, ಕುಮಾರ್, ರಾಜಶೇಖರ್,ರವಿಗೌಡ, ವಿದ್ಯಾಶಂಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top