ಪಿರಿಯಾಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಉದ್ಘಾಟನೆ ನಡೆಯಿತು 

ಪಿರಿಯಾಪಟ್ಟಣ: ಸಮಾಜದ ಹಲವು ಕ್ಷೇತ್ರಗಳಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ರೋಟರಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ರೋಟರಿ 3181 ಜಿಲ್ಲೆಯ ಜಿಲ್ಲಾ ಗವರ್ನರ್ ರೋ.ಪ್ರಕಾಶ್ ಕಾರಂತ್ ಹೇಳಿದರು.

ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ನಡೆದ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಪ್ರತಿಯೊಬ್ಬರು ಸಮಾಜದಲ್ಲಿ ಅವರ ಕರ್ತವ್ಯ ಮತ್ತು ಬದ್ಧತೆ ಪಾಲಿಸುವ ಅಗತ್ಯವಿದೆ, ಸಮಾಜ ಸೇವೆ ಗುಣ ನಿಮ್ಮಲ್ಲಿ ಹೆಚ್ಚಾಗಿ ಇತರರಿಗೆ ಪಸರಿಸುವಂತಾಗಲಿ, 36 ಸದಸ್ಯರನ್ನು ಹೊಂದುವ ಮೂಲಕ ನೂತನ ರೋಟರಿ ಸಂಸ್ಥೆ ಆರಂಭಿಸಿರುವುದು ಶ್ಲಾಘನೀಯ ಎಂದರು. 

ಶಾಸಕ ಕೆ.ಮಹದೇವ್ ಅವರು ಮಾತನಾಡಿ ಸ್ವಾರ್ಥತೆ ಇಲ್ಲದೆ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವ ರೋಟರಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.

ರೋಟರಿ 3181 ಜಿಲ್ಲೆಯ ನಿಯೋಜಿತ ಜಿಲ್ಲಾ ಗವರ್ನರ್ ರೋ.ಎಚ್.ಆರ್ ಕೇಶವ ಅವರು ಮಾತನಾಡಿ ನಮ್ಮಲ್ಲಿ ವೈಯಕ್ತಿಕ ಹಿತಾಸಕ್ತಿ ಮತ್ತು ಸ್ವಾರ್ಥತೆ ಇಲ್ಲದಿದ್ದರೆ ನಾವು ಏನನ್ನಾದರೂ ಸಾಧಿಸಬಹುದು ಎಂಬುದು ರೋಟರಿಯ ಧ್ಯೇಯವಾಗಿದೆ ಎಂದರು.

ಈ ವೇಳೆ ರೋಟರಿ ಮೆಂಬರ್ ಶಿಪ್ ಡೆವಲಪ್ ಮೆಂಟ್ ಚೇರ್ ಮೆನ್ ಗಳಾದ ಪಿ.ಕೆ ರವಿ, ಸುರೇಂದ್ರ ಕಿಣಿ, ನೂತನ ಕ್ಲಬ್ ಸಲಹೆಗಾರ ಡಾ ಕೆ.ಎನ್ ಚಂದ್ರಶೇಖರ್, ವಲಯ 6 ರ ಸಹಾಯಕ ಗವರ್ನರ್ ಗಳಾದ ಅರುಣ್.ಬಿ.ನರಗುಂದ್, ರತನ್ ತಮ್ಮಯ್ಯ, ಎಸ್.ಕೆ ಸತೀಶ್, ವಲಯ ಸೇನಾನಿ ನೆವಿನ್, ಗೋಣಿಕೊಪ್ಪಲು ರೋಟರಿ ಸಂಸ್ಥೆ ಅಧ್ಯಕ್ಷೆ ಜೆ.ಕೆ ಸುಭಾಷಿಣಿ, ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆ ಅಧ್ಯಕ್ಷ ಕೆ.ರಮೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟವಾದ ಸೇವಾ ಚಟುವಟಿಕೆಗಳಿಂದ ಗುರುತಿಸಲ್ಪಟ್ಟಿರುವ ಐದು ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಗೋಣಿಕೊಪ್ಪಲು ರೋಟರಿ ಸಂಸ್ಥೆ ಕಾರ್ಯದರ್ಶಿ ಅರುಣ್ ತಮ್ಮಯ್ಯ, ಪಿರಿಯಾಪಟ್ಟಣ ರೋಟರಿ ಐಕಾನ್ ಕಾರ್ಯದರ್ಶಿ ಪಿ.ಎಸ್ ಹರೀಶ್, ಬಿ.ಆರ್ ಗಣೇಶ್, ಸಿ.ಎನ್.ವಿಜಯ್, ಬಿ.ಎಸ್.ಪ್ರಸನ್ನಕುಮಾರ್, ಎನ್.ಕರುಣಾಕರ್, ಟಿ.ಎಸ್.ಹರೀಶ್, ಗೊರಳ್ಳಿ ಜಗದೀಶ್, ಸಿ.ಎನ್ ರವಿ, ಎ.ಪಿ ದಿನೇಶ್, ಕುಮಾರ್, ಕೆಂಪರಾಜು ಹಾಗು ಗೋಣಿಕೊಪ್ಪ, ಹುಣಸೂರು, ಕೆ.ಆರ್ ನಗರ, ಕುಶಾಲನಗರ, ಮಡಿಕೇರಿ, ಸೋಮವಾರಪೇಟೆ, ಶನಿವಾರಸಂತೆ ರೋಟರಿ ಸದಸ್ಯರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top