ತಾಲ್ಲೂಕಿನಲ್ಲಿ ಕಾವೇರಿ ನದಿ ಪಾತ್ರದಲ್ಲಿ ನರೆ ಹಾವಳಿಯಿಂದ ಸಂತ್ರಸ್ತರಾಗಿ ಪರಿಹಾರ ಕೇಂದ್ರದಲ್ಲಿ ನೆಲಸಿರುವವರನ್ನು ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಕೆ.ಮಹದೇವ್‍ ಶನಿವಾರ ಭೇಟಿ ನೀಡಿ ಸಾಂತ್ವಾನ ಹೇಳಿದರು.

ನೆರೆ ಹಾವಳಿಯಿಂದ 400 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿರುವುದರಿಂದ ತಾಲ್ಲೂಕಿನ ಕೊಪ್ಪ ಗ್ರಾಮದ ರ‍್ಕಾರಿ ಶಾಲೆಯಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರದಲ್ಲಿ ನೆಲಸಿರುವವರನ್ನು ಭೇಟಿ ಮಾಡಿದ ಸಂರ‍್ಭದಲ್ಲಿ ಕಳೆದ ಬಾರಿಯ ನೆರೆ ಬಂದ ಸಂರ‍್ಭದಲ್ಲಿ ಸಹ ಮನೆಗಳು ಮುಳಗಿದ್ದವು ಈ ಬಾರಿ ಸಹ ಮನೆಗಳು ಸಂಪರ‍್ಣವಾಗಿ ಮುಳುಗಿ ಹೋಗಿವೆ ನಮಗೆ ರ‍್ಕಾರ ನೀಡುವ ಊಟ ತಿಂಡಿ ಬೇಡ ಶಾಶ್ವತವಾಗಿ ಬೇರೆಡೆ ಮನೆ ನರ‍್ಮಿಸಿಕೊಡಿ ಎಂದು ಒತ್ತಾಯಿಸಿದರು.
ಈ ಸಂರ‍್ಭದಲ್ಲಿ ಜಿ.ಪಂ.ಸದಸ್ಯ ವಿ.ರಾಜೇಂದ್ರ ಗಿರಿಗೂರು ಬಳಿ ರ‍್ಕಾರಿ ಗೋಮಾಳ ಮತ್ತು ಗ್ರಾಮ ಠಾಣಾ ಜಮೀನಿದ್ದು ಅದರಲ್ಲಿ ನಿವೇಶನ ನೀಡಿ ಮನೆ ನರ‍್ಮಿಸಿಕೊಡುವಂತೆ ಮನವಿ ಮಾಡಿದರು.

ಮಳೆಯ ಶನಿವಾರ ಸಹ ಮುಂದುವರಿದಿದ್ದು ಬೆಳಗ್ಗೆ 11 ಗಂಟೆಯವರೆಗೂ ಬಿಸಿಲಿನ ವಾತಾವರಣ ಇದ್ದರೂ ನಂತರ ಮಳೆ ಪ್ರಾರಂಭವಾಯಿತು. ಕಾವೇರಿ ನದಿಯ ನೀರು ದಿನೇ ದಿನೇ ಜನ ವಸತಿ ಪ್ರದೇಶಕ್ಕೆ ನುಗ್ಗುತ್ತಿದ್ದು ನೆರೆಯಿಂದಾಗಿ ಜನಜೀವನ ಸಂಪರ‍್ಣ ಅಸ್ತವ್ಯಸ್ತಗೊಂಡಿದೆ. ಶನಿವಾರ ಸಹ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ಹೆದ್ದಾರಿ ಬಂದ್‍:ಕುಶಾಲನಗರ ಮತ್ತು ಪಿರಿಯಾಪಟ್ಟಣ ನಡುವಿನ ಹೆದ್ದಾರಿಯಲ್ಲಿ ಕೊಪ್ಪ ಬಳಿ ಕಾವೇರಿ ನದಿಗೆ ನರ‍್ಮಿಸಿರುವ ಸೇತುವೆಯ ಮೇಲೆ ನೀರು ಹರಿಯುತ್ತಿರುವ ಕಾರಣ ಸಂಚಾರ ಬಂದ್ ಮಾಡಲಾಗಿದ್ದು ಕುಶಾಲನಗರ ಮತ್ತು ಮಡಿಕೇರಿ, ಮಂಗಳೂರಿಗೆ ತೆರಳುವುವವರು ಸಿದ್ದಾಪುರ ಮರ‍್ಗವಾಗಿ ಬಳಸು ದಾರಿಯಲ್ಲಿ ಸಾಗಿದರು.

ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧೆಡೆ ಇದುವರೆಗೂ 60ಕ್ಕೂ ಹೆಚ್ಚು ವಾಸದ ಮನೆಗಳ ಗೋಡೆಗಳು, ತಂಬಾಕು ಹದ ಮಾಡುವ ಬ್ಯಾರನ್ ಗಳ ಗೋಡೆಗಳು, ಕೊಟ್ಟಿಗೆಗಳ ಗೋಡೆಗಳು ಕುಸಿದು ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ವರದಿಯಾಗಿದೆ.
ಗಿರುಗೂರು ಬಳಿ 25ಕ್ಕೂ ಹೆಚ್ಚು ಕುಟುಂಬಗಳು ಜಲಾವೃತಗೊಂಡು ಸಂಕಷ್ಠದಲ್ಲಿರುವುದಾಗಿ ರ‍್ಮಸ್ಥಳ ಗ್ರಾಮಾಭೀವೃದ್ದಿ ಸಂಸ್ಥೆಯವರು ಸಂಸದರ ಗಮನಕ್ಕೆ ತಂದರು. ತಕ್ಷಣ ಇದಕ್ಕೆ ಸ್ಪಂದಿಸಿ ಬೋಟ್ ವ್ಯವಸ್ಥೆ ಮಾಡಿಸಿದ್ದಲ್ಲದರೆ, ಅವರನ್ನು ಕರೆ ತರುವಂತೆ ತಹಶೀಲ್ದಾರ್ ಗೆ ಸೂಚಿಸಿದರು.
ರಸ್ತೆ ಸಂರ‍್ಕ ಕಡಿತ: ಕೊಪ್ಪ ಗ್ರಾಮದಿಂದ ಆರ‍್ತಿ ಗ್ರಾಮಕ್ಕೆ ತೆರಳುವ ರಸ್ತೆ, ಕೊಪ್ಪದಿಂದ ಗೋಲ್ಡನ್ ಟೆಂಪಲ್ ಗೆ ತೆರಳುವ ರಸ್ತೆಯಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಬಂದ್‍ ಆಗಿದೆ.

Leave a Comment

Your email address will not be published. Required fields are marked *

error: Content is protected !!
Scroll to Top