
ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಿಸಿದ್ದ 2ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಯಲು ಶಾಲಾ ಕಟ್ಟಡಗಳ ಜೊತೆ ಉತ್ತಮ ಪ್ರಶಾಂತವಾದ ವಾತಾವರಣ ಇರಬೇಕು.ಆಗ ಮಕ್ಕಳಲ್ಲಿ ವಿದ್ಯೆ ಕಲಿಯುವ ಹುಮ್ಮಸ್ಸು ದುಪ್ಪಟ್ಟಾಗುತ್ತದೆ ಎಂದರು. ಪ್ರೌಢ ಶಾಲಾ ವ್ಯವಸ್ಥೆ ಇದ್ದ ಹಾರನಹಳ್ಳಿ ಶಾಲೆಗೆ ಕೆಲವು ವರ್ಷಗಳ ಹಿಂದೆ ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಿತ್ತು.ಅನಂತರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪರಿಶ್ರಮದಿಂದ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಪಬ್ಲಿಕ್ ಶಾಲೆಯನ್ನು ತೆರೆಯಲಾಗಿತ್ತು.ಹಾಗೆಯೇ ನಮ್ಮ ತಾಲ್ಲೂಕಿನಲ್ಲಿ ರಾವಂದೂರು ಮತ್ತು ಹಾರನಹಳ್ಳಿ ಹೋಬಳಿಗಳಿಗೆ 2ಪಬ್ಲಿಕ್ ಶಾಲೆಗಳು ಮಂಜೂರಾದವು. ಆದರೆ ಹಾರನಹಳ್ಳಿ ಶಾಲೆಗೆ ಕಟ್ಟಡ ಅವಶ್ಯಕತೆ ಹೆಚ್ಚಾಗಿತ್ತು.ಆದ್ದರಿಂದ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಜೊತೆ ಚರ್ಚಿಸಿ ನೂತನ ಕಟ್ಟಡಗಳನ್ನು ಮಂಜೂರು ಮಾಡಿಸಿದ್ದೆ ,ಕೆಲವು ತಿಂಗಳುಗಳ ಹಿಂದೆ ನೂತನ ಕಟ್ಟಡಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೆ. ಈಗ ಸುಸರ್ಜಿತವಾದ ಕಟ್ಟಡಗಳು ನಿರ್ಮಾಣವಾಗಿದ್ದು ಉದ್ಘಾಟನೆಗೆ ಆಗಮಿಸಿರುವ ಎಂದರು. ಇದರ ಸದುಪಯೋಗವನ್ನು ಹಾರನಹಳ್ಳಿ ಹೋಬಳಿ ಯಾದ್ಯಂತ ಇರುವ ವಿದ್ಯಾರ್ಥಿಗಳು ಪಡೆದು ಗುಣಮಟ್ಟದ ವಿದ್ಯಾಭ್ಯಾಸವನ್ನು ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಾರನಹಳ್ಳಿ ಗ್ರಾ.ಪಂ ಸದಸ್ಯ ಬಿ.ಎಸ್ ಕೃಷ್ಣೇಗೌಡ, ಅನಿಲ್‌ಕುಮಾರ್, ಚಪ್ಪರದಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ದೇವೇಗೌಡ ಸದಸ್ಯರಾದ ಸಿ.ಕೆ ವೆಂಕಟೇಶ್, ಸಿ.ಪಿ ಸುರೇಶ್, ತಾ.ಪಂ ಮಾಜಿ ಸದಸ್ಯ ಎ.ಆರ್ ಶಂಕರೇಗೌಡ, ಶಾಲೆಯ ಉಪಪ್ರಾಂಶುಪಾಲ ಶಂಕರ್, ಇಂಜಿನಿಯರ್ ಕುಮಾರ್, ಮುಖಂಡರಾದ ಸುರಗಳ್ಳಿ ವಿದ್ಯಾಶಂಕರ್, ರವಿಗೌಡ, ಹಾರನಹಳ್ಳಿ ಪಾರ್ಥೇಗೌಡ, ಅಣ್ಣಯ್ಯಚಾರಿ, ಎಚ್.ಟಿ ಗೋವಿಂದೇಗೌಡ, ಎಚ್.ಟಿ ರಾಮಣ್ಣ, ಚನ್ನೇಗೌಡ, ನಾರಾಯಣ್ ,ಚಪ್ಪರದಹಳ್ಳಿ ಸಿ.ಆರ್ ನಾಗರಾಜು, ಮಂಜು,ಅರುಣ್,ಹುಣಸೇತೊಪ್ಪಲು ಮಹದೇವ್,ಕುಮಾರ್,ಗಣೇಶ್ ಸೇರಿದಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.