
ಪಿರಿಯಾಪಟ್ಟಣ: ಪಕ್ಷಾತೀತವಾಗಿ ಸಾರ್ವಜನಿಕ ಹಿತದ ಇಚ್ಛಾಶಕ್ತಿ ಇದ್ದರೆ ಅಭಿವೃದ್ಧಿ ಸಾಧ್ಯ ಎಂದು ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡಿ.ದೇವರಾಜ ಅರಸು ಕಲಾಭವನ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಉದ್ಘಾಟಿಸಿ ಅವರು ಮಾತನಾಡಿದರು, ನಾನು ಸಚಿವ ಹಾಗೂ ಉಸ್ತುವಾರಿ ವಹಿಸಿಕೊಂಡಿರುವುದು ಕೇವಲ ಬಿಜೆಪಿ ಪಕ್ಷಕಲ್ಲ, ಕ್ಷೇತ್ರದ ಅಭಿವೃದ್ಧಿ ಹಿತದೃಷ್ಟಿಯಿಂದ ಯಾರೇ ನನ್ನ ಬಳಿ ಬಂದರು ಅವರಿಗೆ ಸಹಕಾರ ನೀಡುತ್ತೇನೆ ಈ ನಿಟ್ಟಿನಲ್ಲಿ ಶಾಸಕ ಕೆ.ಮಹದೇವ್ ಅವರ ಕಾರ್ಯ ಶ್ಲಾಘನೀಯ, ಶಾಸಕ ಎಂದರೆ ಹಮ್ಮು ಬಿಮ್ಮು ಬಿಟ್ಟು ಸಾರ್ವಜನಿಕ ಹಿತಾಸಕ್ತಿ ಇದ್ದರೆ ಮಾತ್ರ ಸರ್ಕಾರಿ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಬಹುದು, ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಮಹದೇವ್ ಅವರು ಅಪಾರ ಶ್ರಮಿಸುತ್ತಿದ್ದಾರೆ, ಡಿ.ದೇವರಾಜ ಅರಸು ಅವರು ನಾಡು ಕಂಡ ಮುತ್ಸದ್ದಿ ರಾಜಕಾರಣಿ ಎಂದು ಬಣ್ಣಿಸಿದರು.
ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ ಅಭಿವೃದ್ಧಿ ವಿಚಾರದಲ್ಲಿ ನಾನು ಎಂದಿಗೂ ರಾಜಕೀಯ ಮಾಡುವುದಿಲ್ಲ, ತಾಲ್ಲೂಕಿನ ಅಭಿವೃದ್ಧಿ ನಿಟ್ಟಿನಲ್ಲಿ ಪ್ರತಿ ಮನೆಗೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಹಾಗೂ ಪಟ್ಟಣದ ಅದಿದೇವತೆ ಮಸಣೀಕಮ್ಮ ದೇವಾಲಯದ ಅಭಿವೃದ್ಧಿಗೆ ಅನುಮೋದನೆ ದೊರೆತಿದ್ದು ಶೀಘ್ರ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ಶಾಸಕ ಸ್ಥಾನ ಮುಖ್ಯವಲ್ಲ ಅಧಿಕಾರಾವಧಿಯಲ್ಲಿ ನಾವು ಮಾಡುವ ಜನಪರ ಕೆಲಸಗಳು ಮುಖ್ಯ, ಪಕ್ಷ ಭೇದ ಗುಂಪುಗಾರಿಕೆ ಮಾಡಿದರೆ ಅಭಿವೃದ್ಧಿ ಶೂನ್ಯ ಹಾಗೂ ಜನರಿಂದ ತಿರಸ್ಕಾರವಾಗುತ್ತಾರೆ ನನ್ನ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡುವವರು ನಾಶವಾಗುತ್ತಾರೆ ಎಂದು ಮಾಜಿ ಶಾಸಕರ ಹೆಸರು ಹೇಳದೆ ಪರೋಕ್ಷ ಕಿಡಿಕಾರಿದರು.
ಈ ಸಂದರ್ಭ ಹಿಂದುಳಿದ ವರ್ಗಗಳ ಜಿಲ್ಲಾ ಈ ಸಂದರ್ಭ ಪುರಸಭೆ ತಹಸೀಲ್ದಾರ್ ಕೆ ಚಂದ್ರಮೌಳಿ ಅಧಿಕಾರಿ ಜಿ.ಆರ್ ಮಹೇಶ್, ತಾಲ್ಲೂಕು ಅಧಿಕಾರಿ ಎನ್.ಸುಕನ್ಯಾ, ತಹಸೀಲ್ದಾರ್ ಕೆ.ಚಂದ್ರಮೌಳಿ,
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಪುರಸಭೆ ಅಧ್ಯಕ್ಷ ಕೆ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಉಪಾಧ್ಯಕ್ಷೆ ಆಶಾ ಹಾಗು ಸದಸ್ಯರು, ಸರ್ಕಾರಿ ಪಾಲಿಟೆಕ್ನಿಕ್ ವಿಶೇಷ ಅಧಿಕಾರಿ ಸತ್ಯನಾರಾಯಣರಾವ್, ಪ್ರಾಂಶುಪಾಲರಾದ ರಾಜಣ್ಣ, ದೇವರಾಜ್, ಉಪನ್ಯಾಸಕ ರಂಗಣ್ಣ, ನಿರ್ಮಿತಿ ಕೇಂದ್ರ ಅಧಿಕಾರಿ ರಕ್ಷಿತ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ, ಕೆಡಬ್ಲ್ಯುಎಸ್ಎಸ್ ಬಿ ನಾಮನಿರ್ದೇಶಕ ಸದಸ್ಯ ಆರ್.ಟಿ ಸತೀಶ್, ತಂಬಾಕು ಮಂಡಳಿ ಸದಸ್ಯ ವಿಕ್ರಂ ರಾಜ್, ರೈತ ಸಂಘ ರಾಜ್ಯ ಉಪಾಧ್ಯಕ್ಷ ಲೋಕೇಶ್ ರಾಜೇ ಅರಸ್, ಅರಸು ಜನಾಂಗದ ಮುಖಂಡರು ಹಾಗು ಸ್ಥಳೀಯ ಜನಪ್ರತಿನಿಧಿಗಳು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
