
ಸಮೀಪದ ಕಳ್ಳಿಕೊಪ್ಪಲು ಗ್ರಾಮದ ಗ್ರಾಮ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು ನಾನು ವಿಧಾನಸೌಧಕ್ಕೆ ಹೋದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರ ಕಾಲಿಗೆ ನಮಸ್ಕರಿಸಿ ನಂತರವೇ ಸದನದೊಳಕ್ಕೆ ಪ್ರವೇಶಿಸುತ್ತೇನೆ, ನಾನು ಹಾಗೂ ಅವರು ಹಲವು ವರ್ಷಗಳಿಂದ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದೇವೆ ಅವರು ಹೇಳಿದ ಕೆಲಸವನ್ನು ಇಲ್ಲಿಯವರೆವಿಗೂ ನಾನು ತಿರಸ್ಕರಿಸಿಲ್ಲ ಎಲ್ಲಾ ಕೆಲಸವನ್ನು ಮಾಡಿಕೊಟ್ಟಿದ್ದೇನೆ ನಾನು ಸಹ ಅವರ ಆಪ್ತರಲ್ಲಿ ಒಬ್ಬನಾಗಿದ್ದೇನೆ ಎಂದು ಹೇಳಿದರು .
ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಜಿ ಶಾಸಕರು ಪಿರಿಯಾಪಟ್ಟಣ ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿತ್ತು ಆದರೆ ಅವರ ಸೋಮಾರಿತನದಿಂದ ಅದು ಸಾಧ್ಯವಾಗಿಲ್ಲ, ಮುಂಬರುವ ಚುನಾವಣೆಯಲ್ಲಿ ಮತದಾರರು ಮತ ಕೊಡುವ ವಿಚಾರದಲ್ಲಿ ತಾರತಮ್ಯ ಮಾಡಬೇಡಿ ನಿಮ್ಮ ಕೈಗೆ ಸಿಗುವ ಶಾಸಕರನ್ನು ಆಶೀರ್ವದಿಸಿ, ತಾಲ್ಲೂಕಿನ ಉದ್ದಗಲಕ್ಕೂ ಉತ್ತಮ ಕೆಲಸ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ನನ್ನನ್ನು ಪರಾಭವಗೊಳಿಸಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಗ್ರಾಮಸ್ಥರಿಂದ ಸುಮಾರು 40 ಕ್ಕೂ ಹೆಚ್ಚು ಅರ್ಜಿಗಳು ಮನೆ ಮಾಡಿಸಿಕೊಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಮಹದೇವ್ ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು 6 ಸಾವಿರ ಮನೆಗಳನ್ನು ಮಂಜೂರು ಮಾಡಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುತ್ತಿದ್ದೇನೆ, ನಿಮಗೂ ಮನೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಇಲ್ಲವಾದರೆ ಮುಂಬರುವ ಚುನಾವಣೆ ಮುಗಿದ ಬಳಿಕ ತಕ್ಷಣದಲ್ಲೇ ನಿಮ್ಮ ಸೂರುಗಳನ್ನು ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಚಿಕ್ಕೇಗೌಡನಕೊಪ್ಪಲು ಕೊಪ್ಪಲು ಗ್ರಾಮದಲ್ಲಿ 20 ಹೆಚ್ಚು ಗ್ರಾಮದ ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಮಲ್ಲೇಗೌಡನಕೊಪ್ಪಲು, ತಮ್ಮಡಹಳ್ಳಿ, ಕಾಳೇಗೌಡನ ಕೊಪ್ಪಲು, ಗ್ರಾಮಗಳಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಅಣ್ಣಯ್ಯ ಶೆಟ್ಟಿ , ರಾಮಚಂದ್ರ, ಶಿರಿಯಾಳಶೆಟ್ಟಿ, ಮಲ್ಲಿಕಾರ್ಜುನ, ಸಿದ್ದರಾಮೇಗೌಡ, ಮರೀಗೌಡ, ಕರೀಗೌಡ’, ಮಹದೇವ್, ಸಣ್ಣಸಿದ್ದೇಗೌಡ, ಶಂಕರ, ಚಂದ್ರೇಗೌಡ, ಚಿಕ್ಕೇಗೌಡ, ದೇವರಾಜು, ಗಗನ್, ರಾಮಚಂದ್ರ, ಕಾವೇರಪ್ಪ, ಮುರುಳಿ ಇದ್ದರು.