
ಪಿರಿಯಾಪಟ್ಟಣ: ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅಪಾರವಾದದ್ದು ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕಿನ ಜಿ.ಬಸವನಹಳ್ಳಿ ಗ್ರಾಮದಲ್ಲಿ ಅನ್ಯ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರಿದವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು, ತಮ್ಮ ಗ್ರಾಮಗಳ ಅಭಿವೃದ್ಧಿ ವಿಚಾರವಾಗಿ ಯುವಕರು ಹಿಂಜರಿಕೆ ಮನೋಭಾವ ತೋರದೆ ಪ್ರಶ್ನಿಸುವ ಧೈರ್ಯ ಬೆಳೆಸಿಕೊಂಡಾಗ ಮಾತ್ರ ಬದಲಾವಣೆ ನೋಡಬಹುದು, ಈ ಹಿಂದೆ ತಾಲೂಕಿನಲ್ಲಿ ಅಧಿಕಾರ ನಡೆಸಿದವರನ್ನು ಯಾರು ಪ್ರಶ್ನಿಸದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ, ಶಾಸಕನಾದ ಮೊದಲ ಬಾರಿಗೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕರ್ತವ ನಿರ್ವಹಿಸುತ್ತಿದ್ದೇನೆ, ಪಕ್ಷದ ಸಿದ್ಧಾಂತ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬರುವವರಿಗೆ ಸದಾ ಸ್ವಾಗತವಿದೆ ಎಂದರು.
ಗ್ರಾ.ಪಂ ಸದಸ್ಯ ಬಸವನಹಳ್ಳಿ ನಾರಾಯಣ್ ಅವರು ಮಾತನಾಡಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ತಾಲೂಕಿನಾದ್ಯಂತ ಯುವಕರು ಹಾಗೂ ಮುಖಂಡರು ಜೆಡಿಎಸ್ ಪಕ್ಷ ಸೇರುತ್ತಿರುವುದು ಮುಂಬರುವ ವಿಧಾನಸಭಾ ಚುನಾವಣಾ ಫಲಿತಾಂಶದ ದಿಕ್ಸೂಚಿಯಾಗಿದೆ ಎಂದರು.
ಈ ವೇಳೆ ಗ್ರಾ. ಪಂ ಮಾಜಿ ಸದಸ್ಯ ಜಿ.ಕೆ ಮಹದೇವಪ್ಪ, ಯಜಮಾನರಾದ ಲೋಕೇಶ್, ಶಿವಪ್ಪ, ಎಸ್ ಡಿಎಂಸಿ ಅಧ್ಯಕ್ಷ ಸ್ವಾಮಿ, ಯುವ ಮುಖಂಡರಾದ ಶಂಕರ್, ನವೀನ್, ಮಂಜು, ಗಣೇಶ್, ಚಂದು, ಚಂದ್ರ, ಪುನೀತ್, ನಾಗಣ್ಣ, ಅಂಜುನಯ್ಯ, ಅಭಿ, ಸುರೇಶ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ಜೆಡಿಎಸ್ ಸೇರಿದರು.
ಈ ಸಂದರ್ಭ ಪುರಸಭಾ ಅಧ್ಯಕ್ಷ ಕೆ.ಮಹೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮಹಿಳಾ ಘಟಕ ಅಧ್ಯಕ್ಷೇ ಪ್ರೀತಿ ಅರಸ್, ಟಿಎಪಿಸಿಎಂಎಸ್ ನಿರ್ದೇಶಕಿ ಸುನಿತಾ ಮಂಜುನಾಥ್, ಮುಖಂಡರಾದ ನಾಗರಾಜ್, ತಮ್ಮಯ್ಯ, ಕೃಷ್ಣ, ಕರಿಯಪ್ಪ, ಸಚ್ಚಿದಾನಂದ ಮತ್ತಿತರಿದ್ದರು.