
ಪಿರಿಯಾಪಟ್ಟಣ: ವಿರೋಧಿಗಳ ಟೀಕೆಗಳಿಗೆ ಅಭಿವೃದ್ಧಿ ಕಾರ್ಯಗಳ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕಿನ ಸೀಗೂರು ಗ್ರಾಮ ಪರಿಮಿತಿಯಲ್ಲಿ 10 ಲಕ್ಷ ವೆಚ್ಚದ ಚಾಲನೆ ನೀಡಿ ಅವರು ಮಾತನಾಡಿದರು, 30 ವರ್ಷಗಳ ಬಳಿಕ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಶಾಸಕರನ್ನು ಬದಲಾವಣೆ ಮಾಡಿ ಸಾರ್ವಜನಿಕರು ನನಗೆ ಆಶೀರ್ವಾದ ಮಾಡಿದರು ಆ ನಂಬಿಕೆ ಉಳಿಸಿಕೊಳ್ಳುವುದಕ್ಕೋಸ್ಕರ ಸಂಬಂಧಪಟ್ಟ ಮಂತ್ರಿಗಳ ಬಳಿ ತೆರಳಿ ತಾಲೂಕಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ, ಇದಲ್ಲದೆ ಪ್ರತಿನಿತ್ಯ ನಮ್ಮ ಮನೆಯ ಬಳಿ ವಿವಿಧ ಸಮಸ್ಯೆಗಳ ಬಗೆಹರಿವಿಕೆಗಾಗಿ ಬರುವ ಸಾರ್ವಜನಿಕರಿಗೂ ಸಹ ಅವರ ಸಮಸ್ಯೆಯನ್ನು ಆಲಿಸಿ ಪರಿಹಾರವನ್ನು ಕೊಡಿಸುವ ಎಲ್ಲಾ ಕೆಲಸ ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ, ಹಗಲು ರಾತ್ರಿ ಎನ್ನದೆ ತಾಲ್ಲೂಕು ಅಭಿವೃದ್ಧಿಗೆ ಶ್ರಮಿಸುತ್ತಿರುವ ನನಗೆ ಮುಂಬರುವ
ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಆಯಿತನಹಳ್ಳಿ ಗ್ರಾಮ ಪರಿಮಿತಿಯಲ್ಲಿ 28 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ
ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು, ಈ ವೇಳೆ ಪಕ್ಷದ ಕಾರ್ಯಕರ್ತರು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಅಣ್ಣಯ್ಯಶೆಟ್ಟಿ, ತಾ.ಪಂ ಮಾಜಿ ಸದಸ್ಯ
ಎಸ್.ರಾಮು, ಮುಖಂಡರಾದ ವೆಂಕಟೇಶ್, ಲಕ್ಷ್ಮಣ್, ದೇವರಾಜು, ಮಲ್ಲಿಕಾರ್ಜುನ, ಭೀಷ್ಮ, ಶ್ರೀನಿವಾಸ, ಜಗದೀಶ , ಮಲ್ಲೇಗೌಡ, ಗಣೇಶ್ ಹಾಗೂ ಸ್ಥಳೀಯ ಮುಖಂಡರು ಗ್ರಾಮಸ್ಥರು ಇದ್ದರು.