ಪಿರಿಯಾಪಟ್ಟಣ: ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರವರ ಆಡಳಿತ ಜನ ಮೆಚ್ಚುವಂಥದ್ದು ಎಂದು ಶಾಸಕ ಕೆ ಮಹದೇವ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರ 63ನೇ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು ಹೆಚ್ ಡಿ ದೇವೇಗೌಡ ರವರು ಪ್ರಧಾನಿಯಾಗಿ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರು ಈ ನಾಡಿನ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನೀಡಿದ ಆಡಳಿತ ಸುಧಾರಣೆಗಳು ಇಂದಿಗೂ ಕೂಡ ಪ್ರಸ್ತುತವಾಗಿದೆ. ರೈತರ ಕಾರ್ಮಿಕರ ಹಾಗೂ ದೀನದಲಿತರ ಪರವಾಗಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದು ಜನರ ಬದುಕಿಗೆ ದಾರಿದೀಪವಾಗಿದ್ದಾರೆ ಆದ್ದರಿಂದ ಪ್ರಸ್ತುತ ಪಂಚ ರತ್ನ ಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದೆ. ಈ ಕಾರಣದಿಂದಲೇ ಇವರುಗಳ ಹುಟ್ಟು ಹಬ್ಬವನ್ನು ನಾಡಿನಾದ್ಯಂತ ಸಾಮಾಜಿಕ ಕಾರ್ಯಗಳಿಂದ ಆಚರಿಸಿ ಇವರ ಆಡಳಿತ ಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಿಳಿಸಲಾಗುತ್ತಿದೆ ಅಲ್ಲದೆ ಇವರುಗಳ ಹೆಸರಿನಲ್ಲಿ ಅನೇಕ ಯುವ ಪೀಳಿಗೆಗಳು ಸಾಮಾಜಿಕ ಕಾರ್ಯಕ್ರಮವನ್ನು ಮಾಡುತ್ತಿರುವುದು ಶ್ಲಾಘನಯವಾದದ್ದು. ಇವರ ಈ ಕಾರ್ಯಗಳು ಇತರರಿಗೆ ಮಾದರಿಯಾಗಲಿ ಎಂದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಕೆ ಮಹೇಶ್ ಉಪಾಧ್ಯಕ್ಷ ಆಶಾ ಚಂದ್ರು ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾಕ್ಟರ್ ದೇವಿಕಾ ವೈಧರಿಗಳಾದ ಡಾಕ್ಟರ್ ಪ್ರಭು ಡಾಕ್ಟರ್ ಸದಾಶಿವ ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಆರೋಗ್ಯ ರಾಕ್ಷಸ ಸಮಿತಿ ಮಾಜಿ ಸದಸ್ಯ ಸತೀಶ್ ಹಬಟೂರು ಹಾಗೂ ಮತ್ತಿತರರು ಹಾಜರಿದ್ದರು.