ಪಿರಿಯಾಪಟ್ಟಣ ತಾಲೂಕಿನ ಆರ್.ಡಿ ಕೊಪ್ಪಲು ಗ್ರಾಮದ ಹಲವು ಮುಖಂಡರು ಶಾಸಕ ಕೆ.ಮಹದೇವ್ ಸಮ್ಮುಖ ಜೆಡಿಎಸ್ ಸೇರಿದರು

ಪಿರಿಯಾಪಟ್ಟಣ: ಸಿದ್ದರಾಮಯ್ಯನವರ ನಾಮ ಬಲದ ಮೇಲೆ ಚುನಾವಣೆ ಗೆಲ್ಲುತ್ತಿದ್ದ ಮಾಜಿ ಶಾಸಕರು ಬಳಿಕ ಅಭಿವೃದ್ಧಿ ನಿರ್ಲಕ್ಷಿಸುತ್ತಿದ್ದರು ಎಂದು ಶಾಸಕ ಕೆ.ಮಹದೇವ್ ಆರೋಪಿಸಿದರು.

ತಾಲೂಕಿನ ಆರ್.ಡಿ ಕೊಪ್ಪಲು ಗ್ರಾಮದ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು, ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸೋತರು ತಾಲೂಕಿನ ನಿಷ್ಠಾವಂತ ಜೆಡಿಎಸ್ ಪಕ್ಷದ ಕಾರ್ಯಕರ್ತರು ನನ್ನ ಕೈಬಿಡದೆ ಪಕ್ಷ ಸಂಘಟನೆಗೆ ಒತ್ತು ನೀಡಿ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆಲ್ಲಿಸಿ ಶಾಸಕನಾಗಿ ಆಯ್ಕೆ ಮಾಡಿದರು ಅವರ ಪರಿಶ್ರಮಕ್ಕೆ ಅಗೌರವ ಆಗದಂತೆ ತಾಲೂಕಿನ ಪ್ರತಿಯೊಂದು ಹಳ್ಳಿಗೂ ಪಕ್ಷಾತೀತ ಜಾತ್ಯತೀತವಾಗಿ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿದ್ದೇನೆ, ಕಾರ್ಯಕರ್ತರು ಪಕ್ಷದ ಆಸ್ತಿ ಅವರು ಚುನಾವಣೆ ವೇಳೆ ಮತದಾರರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದ್ದೇನೆ, ಚುನಾವಣೆ ಸಂದರ್ಭ ಕಾರ್ಯಕರ್ತರು ವೈಮನಸ್ಸು ಬಿಟ್ಟು ಸಂಘಟಿತರಾಗಿ ಮತ್ತೊಮ್ಮೆ ತಾಲೂಕಿನಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವಂತೆ ಕೋರಿ ಪಕ್ಷ ಸೇರ್ಪಡೆಯಾದವರನ್ನು ಸ್ವಾಗತಿಸಿದರು.

ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಆರ್.ಎಲ್ ಮಣಿ ಅವರು ಮಾತನಾಡಿ ಶಾಸಕರಾದ ಮೊದಲ ಅವಧಿಯಲ್ಲಿಯೇ ತಾಲೂಕಿನ ಅಭಿವೃದ್ಧಿ ಹಿತ ದೃಷ್ಟದಿಂದ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಿ ಸಾರ್ವಜನಿಕರು ಓಡಾಡಲು ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ರಸ್ತೆ ಕುಡಿಯುವ ನೀರು ಚರಂಡಿ ವ್ಯವಸ್ಥೆ ಸೇರಿದಂತೆ ಹಲವು ಯೋಜನೆಗಳನ್ನು ನೀಡಿರುವ ಶಾಸಕರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮನವಿ ಮಾಡಿದರು.

ಈ ವೇಳೆ ಗ್ರಾಮದ ಚಂದ್ರೇಗೌಡ, ಜಯರಾಮ್,  ಸ್ವಾಮಿ, ಗೌರೀಶ್, ಗಂಗಾಧರ್, ಪಾಪಣ್ಣ, ಸಂತೋಷ್, ಪ್ರಕಾಶ್ ಸೇರಿದಂತೆ ಹಲವರು ಶಾಸಕರ ಸಮ್ಮುಖ ಜೆಡಿಎಸ್ ಪಕ್ಷ ಸೇರಿದರು.

ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಗ್ರಾ.ಪಂ ಸದಸ್ಯ ಕುಮಾರ್, ಮುಖಂಡರಾದ ರವಿ, ಕೆಂಡಗಣ್ಣ, ನಾಗಪ್ಪ, ಮಹದೇವ್, ಮಲ್ಲೇಶ್, ಹೊನ್ನಾಳಿಗೌಡ ಗ್ರಾಮಸ್ಥರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top