ತಾಲೂಕಿನ ವಿವಿದೆಡೆ 90 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ 36.69 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಅವರು ಚಾಲನೆ ನೀಡಿದರು.

ಪಿರಿಯಾಪಟ್ಟಣ: ತಾಲೂಕಿನ ವಿವಿದೆಡೆ 90 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ 36.69 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಅವರು ಚಾಲನೆ ನೀಡಿದರು.

ಈ ವೇಳೆ ಮಾಕೋಡು ಗ್ರಾಮದಲ್ಲಿ ಮಾತನಾಡಿದ ಶಾಸಕರು ಪಟ್ಟಣದಲ್ಲಿರುವ ನನ್ನ ನಿವಾಸಕ್ಕೆ ಪ್ರತಿನಿತ್ಯ ಆಗಮಿಸುವ ನೂರಾರು ಸಾರ್ವಜನಿಕರು ಯಾವುದೇ ಗ್ರಾಮದಿಂದ ಸಮಸ್ಯೆಗಳ ಪರಿಹಾರಕ್ಕಾಗಿ ನನಗೆ ಮನವಿ ನೀಡಿದರು ಯಾವ ಧರ್ಮ ಪಕ್ಷ ಎಂದು ಬೇಧ ಭಾವ ಮಾಡದೆ ಸಮಸ್ಯೆ ಶೀಘ್ರ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದೇನೆ, ರಸ್ತೆ ಚರಂಡಿಗಳ ಅಭಿವೃದ್ಧಿಯಾದರೆ ಹಳ್ಳಿ ಅಭಿವೃದ್ಧಿಯಾದಂತೆ ಇದನ್ನು ಅರಿಯದ ವಿರೋಧ ಪಕ್ಷದ ಮುಖಂಡರು ಚುನಾವಣೆ ಸಮೀಪಿಸುತ್ತಿದ್ದಂತೆ ನನ್ನ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡುತ್ತಿದ್ದು ತಾಲೂಕಿನ ಮತದಾರರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಹಿಂದಿನ ಅವಧಿಯ ಅಭಿವೃದ್ಧಿಗಳು ಹಾಗೂ ನನ್ನ ಅವಧಿಯ ಅಭಿವೃದ್ಧಿಗಳನ್ನು ಮತದಾರರು ಗಮನಿಸುತ್ತಿದ್ದು ವಿರೋಧಿಗಳಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂಬ ಭರವಸೆಯಿದೆ, ತಾಲೂಕಿನ ಪ್ರತಿ ಗ್ರಾಮಗಳಿಗೂ ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಮತ್ತಷ್ಟು ಹೆಚ್ಚಿನ ಅಭಿವೃದ್ಧಿಗೆ ಮುಂದಿನ ಚುನಾವಣೆಯಲ್ಲಿ ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.

ಇದೇ ವೇಳೆ ತಾಲ್ಲೂಕಿನ ಈಚೂರು,ಹಂಡಿತವಳ್ಳಿ,ಕೆಲ್ಲೂರು,ಆರ್.ಹೊಸಹಳ್ಳಿ ಗ್ರಾಮಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.

ತಾ.ಪಂ ಮಾಜಿ ಅಧ್ಯಕ್ಷ ಮಾಕೋಡು ಜವರಪ್ಪ ಅವರು ಮಾತನಾಡಿ ಹಿಂದಿನಿಂದಲೂ ತಾಲೂಕಿನ ಸಮಸ್ಯೆಗಳ ಬಗ್ಗೆ ಅರಿವಿದ್ದರಿಂದ ಮೊದಲ ಬಾರಿಗೆ ಕೆ.ಮಹದೇವ್ ಅವರು ಶಾಸಕರಾದರು ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು ಮುಂದೆಯೂ ಮತ್ತೊಮ್ಮೆ ಗೆಲ್ಲಿಸಿ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸುವಂತೆ ಕೋರಿ ಮಾಕೋಡು ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ತೆರೆಯಲು ಶಾಸಕರು ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಈ ವೇಳೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 15 ಲಕ್ಷ ವೆಚ್ಚದಲ್ಲಿ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಈ ಸಂದರ್ಭ ಬಿಇಓ ಬಸವರಾಜು, ಗ್ರಾ.ಪಂ ಮಾಜಿ ಅಧ್ಯಕ್ಷರಾದ ದ್ರಾಕ್ಷಾಯಣಮ್ಮ, ಸದಸ್ಯರಾದ ಸಣ್ಣಮಾದೇಗೌಡ, ರಾಜೇಗೌಡ, ಮಾಜಿ ಸದಸ್ಯ ಶ್ರೀನಿವಾಸ್, ಪಿಎಸಿಸಿಎಸ್ ಅಧ್ಯಕ್ಷ ಮಹಲಿಂಗಪ್ಪ ಮುಖಂಡರಾದ ಜವರಪ್ಪ, ಬಸವರಾಜ್, ಮೋಹನ್, ಕಂದಾಯಾಧಿಕಾರಿ ಶ್ರೀಧರ್, ಜಿ.ಪಂ ಎಇ ಸುಭಾಷ್, ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top