ಶಾಸಕನಾದೆ ಎಂದು ಬೀಗದೆ ಜನ ಸೇವಕನಂತೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಅಂದಾಜು 47 ಲಕ್ಷ ವೆಚ್ಚದ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ತಾಲೂಕಿನಲ್ಲಿ ಈ ಹಿಂದೆ ಶಾಸಕರಾಗಿ ಆಡಳಿತ ನಡೆಸಿದವರಂತೆ ನಮ್ಮ ಪಕ್ಷದ ಸರ್ಕಾರವಿಲ್ಲ ಎಂದು ಅಭಿವೃದ್ಧಿ ನಿರ್ಲಕ್ಷ ವಹಿಸಿ  ಸುಮ್ಮನೆ ಕೂರದೆ ತಾಲೂಕಿನ ಸಮಸ್ಯೆಗಳ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಹಣ ಮಂಜೂರು ಮಾಡಿಸಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ,  ಮಾಜಿ ಶಾಸಕರು ಕಾರ್ಯಕ್ರಮ ಒಂದರಲ್ಲಿ ನಾನು ಹುಟ್ಟುತ್ತಲೇ ಬೆಳ್ಳಿ ಚಮಚದಲ್ಲಿ ಹಾಲು ಕುಡಿದೆ ಶಾಸಕನಂತೆ ಬಾಯಿ ಬಿಟ್ಟುಕೊಂಡು ಕುಳಿತಿರಲಿಲ್ಲ ಎಂದಿರುವುದು ಅವರ ಮಾತಿನ ವರ್ತನೆ ತೋರಿಸುತ್ತದೆ, ನಮ್ಮ ತಾಯಿ ನಮಗೆ ಚಿನ್ನದ ಒಳ್ಳೆಯಲ್ಲಿ ಹಾಲು ಕುಡಿಸಿದ್ದಾರೆ ಎಂದು ತಿರುಗೇಟು ನೀಡಿ ಅವರ ವಯಸ್ಸು ಹಾಗೂ ಘನತೆಗೆ ತಕ್ಕಂತೆ ಮಾತನಾಡಬೇಕು ತಾಲೂಕಿನ ಪ್ರಜ್ಞಾವಂತ ಮತದಾರರು ಎಲ್ಲವನ್ನು ಗಮನಿಸುತ್ತಿದ್ದು ನನ್ನ ಅವಧಿಯಲ್ಲಿನ ಅಭಿವೃದ್ಧಿ ಮನಗಂಡು ಮತ್ತೊಮ್ಮೆ  ಹೆಚ್ಚು ಮತ ನೀಡಿ ಚುನಾಯಿಸಿದರೆ ಮುಂಬರುವ ದಿನಗಳಲ್ಲಿ ಹಿಟ್ಟೆಹೆಬ್ಬಾಗಿಲು ಗ್ರಾಮವನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.

ಇದೆ ವೇಳೆ ಅಂದಾಜು 1.3 ಕೋಟಿ  ವೆಚ್ಚದಲ್ಲಿ ರಾಮನಾಥ ತುಂಗಾ, ಎಜಿ ಕೊಪ್ಪಲು, ಹೊಸಕೊಪ್ಪಲು, ಕದರೇಗೌಡನ ಕೊಪ್ಪಲು, ಭೋಗನಹಳ್ಳಿ, ಮಲಗನಕೆರೆ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

 ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಆರ್ ಡಬ್ಲ್ಯೂಎಸ್ ಎಇಇ  ಬಿ.ಸಿ ಹಿತೇಂದ್ರ, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹರೀಶ್, ಹಿಟ್ನೆಹೆಬ್ಬಾಗಿಲು ಗ್ರಾ.ಪಂ ಅಧ್ಯಕ್ಷೆ ಸರೋಜಾ ನಾಗೇಗೌಡ, ಉಪಾಧ್ಯಕ್ಷೆ ಸುಧಾ ಶಿವಣ್ಣನಾಯಕ್, ಸದಸ್ಯರಾದ ಮೀನಾಕ್ಷಿ ಬಸವಣ್ಣ, ಮಹದೇವ್, ಮಂಜುನಾಯಕ,  ಪಿಡಿಒ ನಾಗೇಂದ್ರ ಕುಮಾರ್, ಕಾರ್ಯದರ್ಶಿ ದಮಯಂತಿ ಮತ್ತು ಸಿಬ್ಬಂದಿ, ಪಿಎಸಿಸಿಎಸ್ ಅಧ್ಯಕ್ಷ ಕುಮಾರ್, ಮುಖಂಡರಾದ ಶಂಕರ್, ವಿನೋದ್ ಕುಮಾರ್ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top