
ಈ ವೇಳೆ ಇಟ್ಟಗಳ್ಳಿ ಗ್ರಾಮದಲ್ಲಿ ಶಾಸಕ ಕೆ.ಮಹದೇವ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಅನುದಾನ ತಂದು ತಾಲ್ಲೂಕನ್ನು ಅಭಿವೃದ್ಧಿಪಡಿಸುವ ಸುವರ್ಣಾವಕಾಶವನ್ನು ಕೈಚಲ್ಲಿದ ಮಾಜಿ ಶಾಸಕ ಕೆ.ವೆಂಕಟೇಶ್ ತಮ್ಮ ವಿಲಾಸಿ ಜೀವನ ಶೈಲಿಯಿಂದ ತಾಲ್ಲೂಕನ್ನು ಹಿಂದುಳಿಯುವಂತೆ ಮಾಡಿದ್ದಾರೆ, ತಾಲೂಕಿನ ಜನತೆ ಎಲ್ಲವನ್ನು ಗಮನಿಸುತ್ತಿದ್ದು ಈ ಹಿಂದೆ ಕೆಲಸ ಮಾಡದೆ ಇದ್ದರೂ ಕಣ್ಣು ಮುಚ್ಚಿಕೊಂಡು ಓಟು ಹಾಕುತ್ತಿದ್ದ ಕಾಲ ಬದಲಾಗಿದೆ, ನನಗೆ ಅತಿ ಹೆಚ್ಚು ಮತ ನೀಡಿದ ಗ್ರಾಮಗಳು ಸೇರಿ ಮತ ನೀಡದ ಗ್ರಾಮಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದ್ದೇನೆ, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಮತ ಚಲಾಯಿಸಿ, 30 ವರ್ಷ ಆಡಳಿತ ನಡೆಸಿ ಐಷಾರಾಮಿ ಜೀವನ ನಡೆಸಿ ಹೋದವರು ಮತ್ತೆ ನಿಮ್ಮ ಮುಂದೆ ಬರಲಿದ್ದಾರೆ ಅವರ ಭರವಸೆ ಮಾತು ಹಾಗೂ ಸುಳ್ಳು ವದಂತಿಗಳಿಗೆ ಮರುಳಾಗದೆ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ನನ್ನನ್ನು ಬೆಂಬಲಿಸಿ ತಾಲೂಕಿನ ಹೆಚ್ಚಿನ ಅಭಿವೃದ್ಧಿಗೆ ಸಹಕರಿಸಿ, ನಾನು ಯಾವತ್ತೂ ಶಾಸಕನೆಂಬ ಭಾವನೆ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ ನಿಮ್ಮ ಸೇವಕ ಎಂಬಂತೆ ಕೆಲಸ ಮಾಡುತ್ತಿದ್ದೇನೆ ಎಂದರು.
ಈ ವೇಳೆ ಹಲವರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರಿದರು, ಮುದ್ದನಹಳ್ಳಿ ಇಟ್ಟಗಳ್ಳಿಕಾವಲು ಸುಂಡವಾಳು ಕಗ್ಗುಂಡಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪಂಚವಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಕೆ.ರಾಜು, ಉಪಾಧ್ಯಕ್ಷೆ ಮಂಗಳಮ್ಮ, ನಿರ್ದೇಶಕ ತಿಮ್ಮನಾಯಕ, ಗ್ರಾ.ಪಂ. ಸದಸ್ಯರಾದ ಕಾಳೇಗೌಡ, ನಂಜುಂಡಸ್ವಾಮಿ, ಪಿಡಿಓ ವೀರಭದ್ರಶೆಟ್ಟಿ, ಹಾರಂಗಿ ಇಲಾಖೆ ಎಇಇ ನವೀನ್ ಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.