ಪಿರಿಯಾಪಟ್ಟಣ : ಸಮೀಪದ ಅಂಬಲಾರೆ ಗ್ರಾಮದಲ್ಲಿ ಶುಕ್ರವಾರ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್, ಭೂಮಿ ಪೂಜೆ ನೆರವೇರಿಸಿದರು
ಬಳಿಕ ಮಾತನಾಡಿದ ಅವರು ಅಂಬಲಾರೆ ಗ್ರಾಮವು ಜೆಡಿಎಸ್ ನ ಭದ್ರಕೋಟೆಯಾಗಿದ್ದು, ಈ ಗ್ರಾಮದ ಅಭಿವೃದ್ಧಿಗೆ ಸುಮಾರು ₹ 4 ಕೋಟಿ ರೂಗಳಿಗೂ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿಸಿ, ಗ್ರಾಮವನ್ನು ಅಭಿವೃದ್ಧಿಪಡಿಸಿದ್ದೇನೆ, ಕಳೆದ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿಯೂ, ನನಗೆ ಅತಿ ಹೆಚ್ಚು ಮತ ನೀಡಿದ ಈ ಗ್ರಾಮವನ್ನು ನಾನು ದತ್ತು ಗ್ರಾಮವೆಂದು ಭಾವಿಸಿ, ಗ್ರಾಮದ ಸರ್ವಾಂಗಿನ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಿದ್ದೇನೆ ಎಂದರು.
ಇದೆ ವೇಳೆ ಮರಟಿಕೊಪ್ಪಲು, ಆಯಿತನಹಳ್ಳಿ ಗ್ರಾಮದಲ್ಲಿಯೂ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಶೇಖರ್, ಸದಸ್ಯರಾದ ಚಂದ್ರೇಗೌಡ, ಅಶ್ವಿನಿ, ರವಿ, ನಂದೀಶ್, ರಘು, ಜಿಲ್ಲಾ ಪಂಚಾಯಿತಿ ಎಇಇ ಮಲ್ಲಿಕಾರ್ಜುನ, ಎ.ಇ ಮೇಘನಾ, ಮುಖಂಡರಾದ ಮಹೇಶ್, ಶಿವರಂಗೇಗೌಡ, ಶಂಕರೇಗೌಡ, ಮದನ್, ತ್ರಿನೇಶ್, ಕರಿಗೌಡ ಇದ್ದರು.
ಬೆಟ್ಟದಪುರ ಸಮೀಪದ ಅಂಬಲಾರೆ ಗ್ರಾಮದಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ಶೇಖರ್, ಚಂದ್ರೇಗೌಡ, ಶಿವರಾಮೇಗೌಡ, ಕರಿಗೌಡ ಇದ್ದರು.