ಪಿರಿಯಾಪಟ್ಟಣ : ಶ್ರೀ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಭಕ್ತರ ವತಿಯಿಂದ ಸಂಗ್ರಹ ಮಾಡುವ ಹಣವನ್ನು ನಾನು ತಿಂದ್ದಿದ್ದರೆ ನನ್ನ ವಂಶ ನಾಶವಾಗಲಿ, ಇಲ್ಲದಿದ್ದಲ್ಲಿ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ಮಾಜಿ ಶಾಸಕ ಕೆ. ವೆಂಕಟೇಶ್ ಕುಟುಂಬ ನಾಶವಾಗಲಿ ಎಂದು ಶಾಸಕ ಕೆ. ಮಹದೇವ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕರಡಿ ಬೊಕ್ಕೆ ಗ್ರಾಮದಲ್ಲಿ 1.50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದಲ್ಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು ಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರ ಮಾಡಲು ಕೆಲವು ವ್ಯಕ್ತಿಗಳು ಸಮಿತಿಯನ್ನು ಮಾಡಿಕೊಂಡು ಹಣವನ್ನು ಸಂಗ್ರಹಣೆ ಮಾಡಿದ್ದರು. ಈ ಸಮಿತಿಯಲ್ಲಿ ನಾನು ಗೌರವಾಧ್ಯಕ್ಷನಾಗಿದ್ದೇನೆ ಅಷ್ಟೇ, ಆದರೆ ನನ್ನ ಗಮನಕ್ಕೂ ಬಾರದೆ ಕೆಲವು ಸಮಿತಿ ಸದಸ್ಯರುಗಳು ಅಕ್ರಮ ರಶೀದಿಗಳನ್ನು ಮಾಡಿಕೊಂಡು ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದರು. ಈ ಬಗ್ಗೆ ಈ ಹಿಂದೆ ಇದ್ದ ತಹಸೀಲ್ದಾರ್ ಶ್ವೇತ ರವರು ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಪ್ರಕರಣದಲ್ಲಿ ನನ್ನನ್ನು ವಿನಾಕಾರಣ ಮಾಜಿ ಶಾಸಕ ಕೆ. ವೆಂಕಟೇಶ್ ಎಳೆದು ತರುತ್ತಿರುವುದು ದೇವರು ಅವರಿಗೆ ಒಳಿತನ್ನು ಬಯಸುವುದಿಲ್ಲ. ಮಸಣಿಕಮ್ಮ ಜಾತ್ರೋತ್ಸವವಿದ್ದು ನಾಳೆಯೇ ದೇವಾಲಯಕ್ಕೆ ನಾನು ಬಂದು ಅಕ್ರಮದಲ್ಲಿ ನಾನು ಭಾಗಿಯಾಗಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಆರೋಪಿಸುವ ಭಾಗಿ ಶಾಸಕ ಕೆ.ವೆಂಕಟೇಶ್ ಕೂಡ ಬಂದು ನಾನು ಹಣವನ್ನು ದುರುಪಯೋಗ ಮಾಡಿರುವ ಬಗ್ಗೆ ಪ್ರಮಾಣ ಮಾಡಲಿ ಎಂದು ಸವಾಲೆಸದರು. ಇಲ್ಲದಿದ್ದಲ್ಲಿ ನನ್ನ ಮೇಲೆ ಸುಳ್ಳು ಆರೋಪ ಮಾಡುವ ವ್ಯಕ್ತಿಗಳ ವಂಶ ನಾಶವಾಗುತ್ತದೆ ಮತ್ತು ಮನೆ ಹಾಳಾಗುತ್ತದೆ ಎಂದರು.
ತಾಲೂಕಿನಾದ್ಯಂತ ವಿವಿಧ ಗ್ರಾಮಗಳು ಇಂದಿಗೂ ಕೂಡ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ. ಮಾಜಿ ಶಾಸಕ ತನ್ನ ಅಧಿಕಾರದ ಅವಧಿಯಲ್ಲಿ ಈ ಗ್ರಾಮಗಳಿಗೆ ಕೂಡ ಭೇಟಿ ಮಾಡೆ ಇಲ್ಲ. ಇನ್ನೂ ಈ ಗ್ರಾಮಗಳು ಅನುಭವಿಸುತ್ತಿರುವ ಮೂಲಭೂತ ಸೌಲಭ್ಯಗಳ ಸಂಕಷ್ಟಗಳು ಅರಿವಾಗುತ್ತದೆಯೇ ಎಂದರಲ್ಲದೆ ನಾನು ಶಾಸಕನಾಗಿ ಆಯ್ಕೆಯಾದ ನಂತರ ತಾಲೂಕಿನ ಅತಿ ಹಿಂದುಳಿದ ಮತ್ತು ಸೌಲಭ್ಯಗಳಿಂದ ವಂಚಿತವಾದ ಗ್ರಾಮಗಳನ್ನು ಗುರುತಿಸಿ ಪ್ರಾಮಾಣಿಕವಾಗಿ ಮೂಲಭೂತ ಅಭಿವೃದ್ಧಿಯನ್ನು ಮಾಡುತ್ತಿದ್ದೇನೆ.
ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತವನ್ನು ನೀಡುವುದರ ಮೂಲಕ ಮತ್ತೊಮ್ಮೆ ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ,ತಾ ಪಂ ಮಾಜಿ ಸದಸ್ಯ ಎ.ಟಿ. ರಂಗಸ್ವಾಮಿ, ಟಿಬೇಟ್ ಅಧ್ಯಕ್ಷ ಚಿಮ್ಮು ದೋರ್ಜಿ,ಗ್ರಾ ಪಂ ಸದಸ್ಯ ಚಲುವರಾಜ್, ಹಾಲಿನ ಉತ್ಪಾದಕರ ಸಂಘದ ಅಧ್ಯಕ್ಷ ಅಶ್ವಿನ್ ಕುಮಾರ್,ಮುಖಂಡರಾದ ಪೂನ್ನಚ್ಚ,ರಾಜು,ಗಗನ್,ನವೀನ್ ಕುಮಾರ್,ಶಿವರಾಜ್,ಶ್ರೀನಿವಾಸ್,ವಿದ್ಯಾಶಂಕರ್, ಸ್ವಾಮೇಗೌಡ,ಅಣ್ಣೆಗೌಡ,ಜಲೆಂದ್ರ, ಅಶೋಕ್, ವೇಣು,ರಾಜೇಗೌಡ ಮದೇಗೌಡ,ಶಿವಪ್ಪ,ಪೀಡಿಒ ರವಿಕುಮಾರ್,ಎ ಇ ಇ ಮಲ್ಲಿಕಾರ್ಜುನ, ಮೇಘನಾ, ಗುತ್ತಿಗೆದಾರ ಶಂಭು ಸೇರಿದಂತ್ತೆ ಮತಿತ್ತರರು ಹಾಜರಿದ್ದರು.