ಪಟ್ಟಣದಲ್ಲಿ ಎಸ್ಎಫ್ಸಿ ವಿಶೇಷ ಅನುದಾನದಲ್ಲಿ 7 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಜನಪ್ರತಿನಿಧಿಗಳಾಗಿ ಆಯ್ಕೆಯಾದ ಬಳಿಕ ತಮ್ಮ ಜವಾಬ್ದಾರಿ ಅರಿತು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಜನ ಮನ್ನಣೆಗಳಿಸಬಹುದು, ಮಾಜಿ ಶಾಸಕರ ಅಭಿವೃದ್ಧಿ ನಿರ್ಲಕ್ಷತನದಿಂದಾಗಿ ತಾಲೂಕಿನ ಏಳಿಗೆ ಕುಂಠಿತವಾಗಿದ್ದು ಶಾಸಕನಾದ ಮೊದಲ ಬಾರಿಗೆ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ, ಪಟ್ಟಣದಲ್ಲಿಯೇ ವಾಸಿಸುವುದರಿಂದ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿದ್ದು ಈ ಹಿಂದೆ ಪುರಸಭೆ ಅಧ್ಯಕ್ಷನಾಗಿದ್ದ ಸಂದರ್ಭ ಕಾವೇರಿ ಕುಡಿಯುವ ನೀರು ಯೋಜನೆ ಸೇರಿದಂತೆ ವಸತಿ ಸಮಸ್ಯೆಗೆ ಸ್ಪಂದಿಸಿ ನಿವೇಶನ ಹಂಚಿಕೆ ಮಾಡಲಾಗಿತ್ತು ಅದಾದ ಬಳಿಕ ಈವರೆಗೂ ಪುರಸಭೆ ವತಿಯಿಂದ ವಸತಿ ರಹಿತರಿಗೆ ನಿವೇಶನ ಹಂಚಲು ಸಾಧ್ಯವಾಗಿಲ್ಲ, ಸರ್ಕಾರ ಇಲ್ಲದಿದ್ದರೂ ಸಹ ಸ್ಥಳೀಯ ಸಮಸ್ಯೆಗಳ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿ ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಮುಂಬರುವ ಚುನಾವಣೆಯಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಪಟ್ಟಣದ ಜನತೆ ಹೆಚ್ಚು ಆಶೀರ್ವದಿಸುವಂತೆ ಮನವಿ ಮಾಡಿದರು.
ಪುರಸಭೆ ಅಧ್ಯಕ್ಷ ಕೆ.ಮಹೇಶ್ ಅವರು ಮಾತನಾಡಿ ಶಾಸಕ ಕೆ.ಮಹದೇವ್ ಅವರ ಮಾರ್ಗದರ್ಶನದಲ್ಲಿ ಸರ್ವ ಸದಸ್ಯರ ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ ಅವರು ಮಾತನಾಡಿ ಪಟ್ಟಣದಲ್ಲಿನ ಮೂಲಭೂತ ಸೌಕರ್ಯಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಕುಮಾರ್, ಮುತ್ತಪ್ಪ ಉಪಾಧ್ಯಕ್ಷೆ ಪಿ.ಕೆ ಆಶಾ, ಸದಸ್ಯರಾದ ಮಂಜುನಾಥ್ ಸಿಂಗ್, ನಿರಂಜನ್, ರವಿ, ಪಿ.ಎನ್ ವಿನೋದ್, ಪ್ರಕಾಶ್ ಸಿಂಗ್, ಭಾರತಿ, ಮುಖಂಡರಾದ ಸೈಯದ್ ಇಲಿಯಾಸ್, ಮುಶಿರ್ ಖಾನ್, ರವಿ, ಶಿವಣ್ಣ, ಗೌಸ್ ಷರಿಪ್, ಕಿರಿಯ ಅಭಿಯಂತರ ವನಿತ, ಆರೋಗ್ಯ ನಿರೀಕ್ಷಕ ಮೋಹನ್, ಕಂದಾಯಾಧಿಕಾರಿ ಆದರ್ಶ್, ಕರ ವಸುಲಿಗಾರ ಚಂದನ್ ಮತ್ತಿತರಿದ್ದರು.