ಪಿರಿಯಾಪಟ್ಟಣ : ಸಮೀಪದ ಮರದೂರು ಗ್ರಾಮದಲ್ಲಿ ಶುಕ್ರವಾರ ಗ್ರಾಮದ ಮುಖ್ಯದ್ವಾರದ ಸ್ವಾಗತ ಕಮಾನು ಅನ್ನು ಶಾಸಕ ಕೆ. ಮಹಾದೇವ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಈ ಗ್ರಾಮದ ಶಕ್ತಿ ದೇವತೆ ಎಂದೇ ಪ್ರಸಿದ್ಧಿ ಪಡೆದಿರುವ ತೋಪನಮ್ಮ ತಾಯಿಯ ಸೇವೆ ಮಾಡಲು ನಮಗೂ ಅವಕಾಶ ಸಿಕ್ಕಂತಾಗಿದೆ. ಹಲವು ವರ್ಷಗಳಿಂದ ಬೇಡಿಕೆ ಇದ್ದ ಈ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಗ್ರಾಮಸ್ಥರು ಎಲ್ಲರೂ ಒಟ್ಟಾಗಿ ಸೇರಿ ದೇವರ ಕಾರ್ಯಕ್ರಮಗಳನ್ನು ಮಾಡಲು ಮುಂದಾಗುತ್ತಿರುವುದು ಹರ್ಷದಾಯಕವಾಗಿದೆ, ತೋಪನಮ್ಮ ದೇವಾಲಯದ ಅಭಿವೃದ್ಧಿಗೂ ನನ್ನ ಕೈಮೀರಿ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಅತ್ತಿಗೋಡು ವಿರೂಪಾಕ್ಷ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯ ಪಾಲಕ ಅಭಿಯಂತರದ ಮಲ್ಲಿಕಾರ್ಜುನ್, ಮುಖಂಡರಾದ ಮಲ್ಲೇಗೌಡ,ರಮೇಶ್, ಶತ್ರುಘ್ನ, ಪ್ರಭಾಕರ್, ಸಿದ್ದೇಗೌಡ, ಕರಿಗೌಡ, ಸಿದ್ದೇಶ್, ಪಿಎಸ್ಐ ಪ್ರಕಾಶ್ ಎಂ ಎತನಮನಿ ಇದ್ದರು.