ಪಿರಿಯಾಪಟ್ಟಣ: ರಾಜ್ಯದ ಜನತೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತ ನೀಡಿ ಸರ್ಕಾರ ರಚಿಸಿದ ತಕ್ಷಣ ಯಾವುದೇ ಕುಟುಂಬ ಸಾಲದ ಸುಳಿಗೆ ಸಿಲುಕದಂತೆ ಪಂಚರತ್ನ ಯೋಜನೆ ಜಾರಿಗೆ ತರುವೆ ಇಲ್ಲ ಜೆಡಿಎಸ್ ಪಕ್ಷ ವಿಸರ್ಜಿಸುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಹರವೆ ಮಲ್ಲರಾಜಪಟ್ಟಣ ಬಳಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿ ಶಾಸಕ ಕೆ.ಮಹದೇವ್ ಪರ ಮತಯಾಚಿಸಿ ಅವರು ಮಾತನಾಡಿದರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಂತೆ ಚುನಾವಣಾ ಪ್ರಚಾರಕ್ಕೆ ಉತ್ತರ ಭಾರತದಿಂದ ದಂಡು ದಾಳಿ ಕರೆಸದೆ ಮೇ.1 ರಿಂದ ಉತ್ತರ ಕರ್ನಾಟಕ ಸೇರಿದಂತೆ 40 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡಿ ಜನರ ಆಶೀರ್ವಾದ ಕೇಳುತ್ತಿರುವೆ, ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಹಣದ ಕೊರತೆಯಿಲ್ಲ ಏಕೆಂದರೆ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ ನಾನು ಮುಖ್ಯಮಂತ್ರಿ ಆದಾಗ ರಾಜ್ಯದ ಜನರ ತೆರಿಗೆ ಹಣ ಲೂಟಿ ಮಾಡಲು ಬಿಡಲಿಲ್ಲ ಅದೇ ನಮ್ಮ ತಪ್ಪು ಆಗಿದೆ ಎನ್ನಿಸುತ್ತಿದೆ ಕುಮಾರಣ್ಣ 2 ಸಲ ಮುಖ್ಯಮಂತ್ರಿ ಆಗಿ ಚೆನ್ನಾಗಿ ದುಡ್ಡು ಮಾಡಿದ್ದಾನೆ ಅಂದುಕೊಂಡಿದ್ದಾರೆ ಆದರೆ ನಾನು ಆ ಪಾಪದ ಕೆಲಸ ಮಾಡದೆ ಬಡಜನರ ಕಣ್ಣೊರೆಸುವ ಕೆಲಸ ಮಾಡಿದೆ, ಮೋದಿ ಕಾಂಗ್ರೆಸ್ ಅನ್ನು 85 ಪರ್ಸೆಂಟ್ ಅನ್ನುತ್ತಾರೆ ಕಾಂಗ್ರೆಸ್ ಬಿಜೆಪಿ ಅವರನ್ನು 40 ಪರ್ಸೆಂಟ್ ಅನ್ನುತ್ತಾರೆ ನಾನು ಕಳೆದ ಬಾರಿ ಸಾಲ ಮನ್ನಾ ಮಾಡುವ ಬದಲು ಅದೇ ದುಡ್ಡನ್ನು ಬೇರೆ ಯೋಜನೆಗಳಿಗೆ ನೀಡಿ ಪರ್ಸೆಂಟ್ ತೆಗೆದುಕೊಂಡಿದ್ದರೆ 8 ರಿಂದ 10 ಸಾವಿರ ಕೋಟಿ ದುಡ್ಡು ಮಾಡಬಹುದಿತ್ತು ಆದರೆ ನಾನು ರೈತರ ಸಾಲ ಮನ್ನಾ ಮಾಡಿದೆ, ರಾಜ್ಯದ ಜನತೆ ಸ್ವತಂತ್ರ ಅಧಿಕಾರ ನೀಡಿದರೆ ಮುಂದಿನ 5 ವರ್ಷದಲ್ಲಿ 2.5 ಲಕ್ಷ ಕೋಟಿ ಸಂಗಹಿಸಿ ಆ ಬಂಡವಾಳವನ್ನು ಪಂಚರತ್ನ ಯೋಜನೆಗಳ ಜಾರಿಗೆ ನೀಡುತ್ತೇನೆ, ಮಾದ್ಯಮಗಳಲ್ಲಿ 1 ದಿನ ಕಾಂಗ್ರೆಸ್ ನವರಿಗೆ 100 ರಿಂದ 120 ಸೀಟ್ ತೋರಿಸುತ್ತಾರೆ ನಂತರ 2 ದಿನ ಬಿಟ್ಟು ಬಿಜೆಪಿ ಅವರಿಗೆ 100 ರಿಂದ 120 ಸೀಟು ನೀಡುತ್ತಾರೆ ಇದಕ್ಕೆ ಕಾರಣ ರಾಷ್ಟ್ರೀಯ ಪಕ್ಷಗಳು ಮಾದ್ಯಮಗಳಿಗೆ 10 ರಿಂದ 20 ಕೋಟಿ ಹಣ ಕೊಟ್ಟು ಈ ರೀತಿ ಮಾಡಿಸುತ್ತಾರೆ ನನಗೆ ಅದು ಬೇಕಿಲ್ಲ ಎಂದರು.
ಪಿರಿಯಾಪಟ್ಟಣದ ಜನತೆ ಮಹದೇವ್ ಅವರನ್ನು ಕೈಬಿಟ್ಟಿಲ್ಲ ಅವರಿಗೆ ಮೊದಲ ಚುನಾವಣೆಯಲ್ಲಿ ನಾವು ಟಿಕೆಟ್ ಕೊಡಲು ಸಮಯ ವಿಳಂಬ ಮಾಡಿದ ತಪ್ಪಿನಿಂದ ಹಾಗು 2 ನೇ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ನಂತರ ಕಾಂಗ್ರೆಸ್ ಸರ್ಕಾರವೇ ಬಂದು ಮತಯಾಚಿಸಿದ್ದರಿಂದ ಅತ್ಯಲ್ಪ ಮತಗಳಲ್ಲಿ ಸೋಲುಂಟಾಯಿತು ಬಳಿಕ ಮೊದಲ ಬಾರಿಗೆ ಶಾಸಕರಾದರು ಜನಪರ ಆಡಳಿತ ನೀಡಿ ತಾಲೂಕನ್ನು ಅಭಿವೃದ್ಧಿ ಮಾಡಿರುವ
ಕೆ.ಮಹದೇವ್ ಅವರನ್ನು ಮತ್ತೊಮ್ಮೆ ಬೆಂಬಲಿಸಿ ಗೆಲ್ಲಿಸಿ ನನ್ನ ಕೈ ಬಲಪಡಿಸಬೇಕು, ಮೈಮುಲ್ ಒಕ್ಕೂಟಕ್ಕೆ ತಾಲ್ಲೂಕಿನಲ್ಲಿ 40 ಸಾವಿರ ಲೀಟರ್ ಹೋಗುತ್ತಿದ್ದ ಹಾಲು ಪ್ರಸನ್ನ ಮೈಮುಲ್ ಅಧ್ಯಕ್ಷ ಆದ ಮೇಲೆ ಉತ್ತಮ ಆಡಳಿತ ಮೂಲಕ ಪ್ರಸ್ತುತ 2 ಲಕ್ಷ ಲೀಟರ್ ತಲುಪಿರುವುದು ಅವರ ಕಾರ್ಯಕ್ಷಮತೆಗೆ ಉದಾಹರಣೆಯಾಗಿದ್ದು ತಂದೆಗೆ ತಕ್ಕ ಮಗನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ಶಾಸಕನಾದ ಬಳಿಕ ಕುಮಾರಸ್ವಾಮಿಯವರ ಸಹಕಾರದಿಂದ ಸರ್ಕಾರ ಯಾವುದೇ ಇದ್ದರೂ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ, ಈ ನಾಡಿನ ರೈತ ಕಾರ್ಮಿಕರು ಹಾಗೂ ಎಲ್ಲಾ ವರ್ಗದ ಜನತೆ ಮುಂದಿನ ದಿನಗಳಲ್ಲಿ ಅರ್ಥಿಕವಾಗಿ ಸದೃಢವಾಗಬೇಕಾದರೆ ತಾವೆಲ್ಲ ಕುಮಾರಣ್ಣ ಮುಖ್ಯಮಂತ್ರಿ ಆಗಲು ಬೆಂಬಲ ನೀಡಬೇಕು, ನನ್ನ ಕಾರ್ಯಕರ್ತರ ಮನೆಗೆ ಹೋಗಿ 1 ರಿಂದ 5 ಲಕ್ಷ ಹಣ ಕೊಟ್ಟು ತಮ್ಮ ಕಡೆ ಸೆಳೆಯಲು ಮುಂದಾಗುತ್ತಿರುವ ಕಾಂಗ್ರೆಸ್ ಪಕ್ಷದವರು ಮೂಟೆಯಲ್ಲಿ ತರುವ ಹಣವನ್ನು ಅವನ ಎದೆ ಮೇಲೆ ಸುರಿದು ಕಳಿಸಿ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಿ ಎಂದು ಮನವಿ ಮಾಡಿದರು.
ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಮೈಮೂಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ರು, ಪುರಸಭಾ ಅಧ್ಯಕ್ಷ ಕೆ.ಮಹೇಶ್, ಮಾಜಿ ಮೇಯರ್ ರವಿಕುಮಾರ್, ಮುಖಂಡರಾದ ಕೆ.ಎಸ್ ಮಂಜುನಾಥ್, ದೊರೆಕೆರೆ ನಾಗೇಂದ್ರ,
ಸಿ.ಎನ್ ರವಿ, ಆರ್.ಎಲ್ ಮಣಿ, ಗೋವಿಂದೇಗೌಡ, ಎಸ್.ರಾಮು, ಗಗನ್, ಹಸೀಬ್, ಅತ್ತರ್ ಮತಿನ್, ಲೋಕೇಶ್ ರಾಜೇ ಅರಸ್ ಹಾಗೂ ಜೆಡಿಎಸ್ ವಿವಿಧ ಘಟಕ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.