
ನನ್ನ ಶಕ್ತಿ ಮೀರಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಒಂದೆ ಹಂತದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲ್ಲೂಕಿನ ಕುಡಕೂರು, ಕೊಣಸೂರು ಗ್ರಾಮದಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧೆಡೆ ಒಟ್ಟು ರೂ.2.60 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಕೋಮಲಾಪುರ ಗ್ರಾಮದಲ್ಲಿ ಮಾತನಾಡಿದರು. ಎಲೆಕ್ಟ್ರಾನಿಕ್ ಮೀಡಿಯಾಗಳು ಸುಳ್ಳು ಸುದ್ದಿ ಬಿತ್ತರಿಸುವುದನ್ನು ನಿಲ್ಲಿಸಲಿ, ನಾನು ಜೆಡಿಎಸ್ ತೊರೆಯುವುದಿಲ್ಲ, ಬಿಜೆಪಿ ಸೇರುವುದಿಲ್ಲ ಎಂದು ಹೇಳಿದರು. ಇತ್ತೀಚೆಗೆ ಮಾಜಿ ಪ್ರಾದಾನಿ ಹೆಚ್.ಡಿ.ದೇವೇಗೌಡರು ಮೈಸೂರಿನ ಸಮೀಪದ ಬಿಳಿಕೆರೆ ಗ್ರಾಮಕ್ಕೆ ಭೇಟಿ ನೀಡಿದಾಗ ಅವರ ಸಮ್ಮುಖದಲ್ಲಿಯೇ ನಾನು ಸ್ಪಷ್ಟನೆ ನೀಡಿದ್ದೇನೆ, ನಾನು ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗುತ್ತಿಲ್ಲ ಹೀಗಿದ್ದರೂ ಎಂದು. ಹೀಗಿದ್ದರೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಸುಳ್ಳು ಸುದ್ದಿ ಹರಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸಿ ನನ್ನ ತೇಜೋವದೆ ಮಾಡುತ್ತಿವೆ ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ದ ಹರಿಹಾಯ್ದರು. ನಾನು ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ನಿಷ್ಠರಾದ ಶಾಸಕ ನಾನೆಂದು ಅವರಿಗೆ ದ್ರೋಹ ಮಾಡುವುದಿಲ್ಲ ಎಂದು ಸ್ಪಷ್ಠ ಪಡಿಸಿದರು.
ತಾಲ್ಲೂಕಿನ ಅಧಿಕಾರಿಗಳು ಕಚೇರಿಯಲ್ಲಿ ಕೂರದೆ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಈ ಸಂದರ್ಭ ತಾ.ಪಂ. ಸದಸ್ಯೆ ಶೋಭ, ಗ್ರಾ.ಪಂ ಅಧ್ಯಕ್ಷರಾದ ಈರೇಗೌಡ, ಚಂದ್ರಣ್ಣ, ಜಿ.ಪಂ.ಮಾಜಿ ಕೆ.ಸಿ.ರಾಜಶೇಖರಯ್ಯ, ಮುಖಂಡರಾದ ರಘುನಾಥ್, ಗಣೇಶ್ ಕೋಮಲಾಪುರ, ಚಂದ್ರು, ಯೋಗೇಶ, ಚಲುವಯ್ಯ, ಗೋವಿಂದೇಗೌಡ, ಸೋಮೇಗೌಡ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.