ತಾಲೂಕಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಪರಿಹಾರ ನಿಟ್ಟಿನಲ್ಲಿ ಹಂತ ಹಂತವಾಗಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು, ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು ಸಹ ತಾಲೂಕಿನ ಜನತೆ ವಿಶ್ವಾಸವಿಟ್ಟು ಮೂರನೇ ಬಾರಿ ಶಾಸಕನಾಗಿ ಆಯ್ಕೆ ಮಾಡಿದರು, ಜೆಡಿಎಸ್ ಪಕ್ಷದ ಕಾರ್ಯಕರ್ತರು ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ ಅವರ ನಂಬಿಕೆಗೆ ಚ್ಯುತಿ ಬರದಂತೆ ಮೊದಲು ಅವರ ಮಾತುಗಳಿಗೆ ಮನ್ನಣೆ ನೀಡುವುದಾಗಿ ತಿಳಿಸಿದರು, ತಾಲೂಕಿನ ಬಹುತೇಕ ರಸ್ತೆಗಳು ಗುಂಡಿ ಬಿದ್ದು ಜನರು ಸಂಚರಿಸಲು ತೊಂದರೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಭರವಸೆ ನೀಡಿದರು, ತಾಲೂಕಿನ ಲಿಂಗಾಪುರ ಗ್ರಾಮದ 3 ಕಿ.ಮೀ ರಸ್ತೆ ನಿರ್ಮಾಣಕ್ಕೆ 3 ಕೋಟಿ ಹಣ ನೀಡಲಾಗಿದ್ದು, ಗ್ರಾಮಸ್ಥರ ಸಲಹೆ ಪಡೆದು ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

    ಇದೇ ವೇಳೆ ಲಿಂಗಾಪುರ ಗ್ರಾಮದ ರೈತರು ನಿಗದಿತ ಸಮಯಕ್ಕೆ ಕರೆಂಟ್ ನೀಡುತ್ತಿಲ್ಲ, ಕೆಲವೊಮ್ಮೆ ರಾತ್ರಿ ಪೂರ್ತಿ  ಕೆರೆಂಟ್ ಇರುವುದಿಲ್ಲ,  ಇದರಿಂದ ಈ ಭಾಗದ ನೂರಾರು ರೈತರುಗಳಿಗೆ ತಮ್ಮ ಜಮೀನಿನಿಂದ ಫಸಲು ತರಲು ಕಷ್ಟವಾಗಿ ತೊಂದರೆಯಾಗುತ್ತಿದೆ, ಈ ಭಾಗದಲ್ಲಿ ಆನೆಗಳ  ಹಾವಳಿ ಹೆಚ್ಚಾಗಿದ್ದು ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಈ ವಿಷಯವಾಗಿ ಚೆಸ್ಕಾಂ ಅಧಿಕಾರಿಗಳಿಗೆ ಎಷ್ಟೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು, ದೂರಿಗೆ ಸ್ಪಂದಿಸಿದ ಶಾಸಕರು ಸ್ಥಳದಲ್ಲಿದ್ದ ಚೆಸ್ಕಾಂ ಎಇಇ ಕಲೀಂ ಕರೆಸಿ ಕೂಡಲೇ  ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

   ತಾಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಸಹ ಗುದ್ದಲಿ ಪೂಜೆ ನೆರವೇರಿಸಲಾಯಿತು.       ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪರಾಜೇಶ್, ಜಿ.ಪಂ ಸದಸ್ಯ ಜಯಕುಮಾರ್, ಗ್ರಾ.ಪಂ ಅಧ್ಯಕ್ಷ ಸುನಂದ, ಸದಸ್ಯ ನಂದೀಶ್, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಮುಖಂಡರಾದ ರಘುನಾಥ್, ಪಾಲಾಕ್ಷ, ವಸಂತ, ಕಾಳಯ್ಯ, ಭೋಜಪ್ಪ, ಜಗದೀಶ್, ಕುಮಾರ್ ಹಾಗು ವಿವಿಧ ಇಲಾಖೆ ಸರ್ಕಾರಿ ಅಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top