ತಾಲೂಕಿನ ಮಾಕೋಡು ಗ್ರಾಮದಲ್ಲಿ 90 ಲಕ್ಷ ರೂ ವೆಚ್ಚದ ಗ್ರಾಮ ಪರಿಮಿತಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಶಾಸಕನಾಗಿ ಆಯ್ಕೆಯಾದಾಗಿನಿಂದ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಆದಷ್ಟು ಪರಿಹಾರ ಒದಗಿಸಿ ಹಲವು ನೂತನ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ, ಗ್ರಾಮೀಣ ಪ್ರದೇಶಗಳಲ್ಲಿನ ಸಾರ್ವಜನಿಕರು ಸಹ ಸ್ಥಳೀಯ ಗ್ರಾ.ಪಂ ಕಚೇರಿಗಳ ಮೂಲಕ ನಡೆಸಬಹುದಾದ ಹಳ್ಳಿಗಳ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳ ಮಾಹಿತಿ ಪಡೆದು ಸ್ಥಳೀಯವಾಗಿ ಆಗಬಹುದಾದ ಕೆಲಸಗಳ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು, ಅಧಿಕಾರಿಗಳು ಸಹ ಸಾರ್ವಜನಿಕರ ಮನವಿಗಳನ್ನು ನಿರ್ಲಕ್ಷಿಸದೆ ಸಮಸ್ಯೆ ಬಗೆಹರಿಸಲು ಗಮನ ಕೊಡುವಂತೆ ಸೂಚಿಸಿದರು.
ಗ್ರಾಮಸ್ಥರು ಸಮರ್ಪಕ ಬಸ್ ಸೌಲಭ್ಯ ಕೊರತೆ, ಕೆರೆ ಒತ್ತುವರಿ ತೆರವು, ಅರಣ್ಯ ಇಲಾಖೆಯವರು ನಿರ್ಬಂಧಿಸಿರುವ ಪ್ರದೇಶಗಳ ತೆರವು, ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವಂತೆ ಮನವಿ ಸಲ್ಲಿಸಿದರು.
ಇದೇ ವೇಳೆ ಕೆರೆ ಮೇಗಲಕೊಪ್ಪಲು ಗ್ರಾಮದಲ್ಲಿ 60 ಲಕ್ಷ ರೂ ವೆಚ್ಚದ ಗ್ರಾಮ ಪರಿಮಿತಿ ರಸ್ತೆ ಕಾಮಗಾರಿ ಚಾಲನೆ, ಹಂಡಿತವಳ್ಳಿ ಗ್ರಾಮದಲ್ಲಿ 60 ಲಕ್ಷ ರೂ ವೆಚ್ಚದ ಗ್ರಾಮ ಪರಿಮಿತಿ ರಸ್ತೆಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಉಪಾಧ್ಯಕ್ಷೆ ಜಯಮ್ಮ, ಮಾಜಿ ಅಧ್ಯಕ್ಷ ಜವರಪ್ಪ, ಗ್ರಾ.ಪಂ ಅಧ್ಯಕ್ಷೆ ರುಕ್ಕಮ್ಮ, ಮಾಜಿ ಅಧ್ಯಕ್ಷೆ ದ್ರಾಕ್ಷಾಯಣಮ್ಮ, ಸದಸ್ಯರಾದ ಶ್ರೀನಿವಾಸ್, ರಾಮಚಂದ್ರ, ಕುಮಾರ್, ಜವರಾಯಿ, ಮಾಕೋಡು ಪಿಎಸಿಸಿಎಸ್ ಅಧ್ಯಕ್ಷ ಮಹಾಲಿಂಗಪ್ಪ, ಮಾಜಿ ಅಧ್ಯಕ್ಷ ಜವರೇಗೌಡ ಹಾಗೂ ನಿರ್ದೇಶಕರುಗಳು, ಮುಖಂಡರಾದ ನಾಗರಾಜು, ಶಿವಪ್ಪ, ಸ್ವಾಮಿಗೌಡ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.