ಭಾಷೆ ಮತ್ತು ಸಂಸ್ಕೃತಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಆ ಪಾತ್ರವನ್ನು ಕರವೇ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು.

ಪಟ್ಟಣದ ರೋಟರಿ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ನಾಡು ನುಡಿ ರಕ್ಷಣೆಗೆ ರಾಜ್ಯಾದ್ಯಂತ ಸಂಘಟನೆಯ ಬಲ ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು. ಕನ್ನಡ ನಾಡಿಗೆ ಪರಭಾಷಿಕರು ದಾಳಿಮಾಡದಂತೆ ತಡೆಯುವ ಮತ್ತು ಕನ್ನಡ ಭಾಷೆಯನ್ನು ಬೆಳೆಸಲು ನಾವೆಲ್ಲರೂ ಮುಂದಾಗ ಬೇಕಿದೆ ಎಂದು ತಿಳಿಸಿದರು
ಕರವೇ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎನ್.ಎಲ್. ಗಿರೀಶ್ ಮಾತನಾಡಿ ಕಳೆದ 25 ವರ್ಷಗಳಿಂದ ನಮ್ಮ ಸಂಘಟನೆ ತಾಲ್ಲೂಕಿನಲ್ಲಿ ಸಕ್ರಿಯವಾಗಿ ಕೆಲಸ ಕೆಲಸ ನಿರ್ವಹಿಸುತ್ತಿದ್ದು, ನೆಲ ಜಲ ಮತ್ತು ಕನ್ನಡ ಭಾಷೆಯ ಬಗ್ಗೆ ಕುಂದು ಉಂಟಾದಂತೆ ನಮ್ಮ ಸಂಘಟನೆ ಹೋರಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಆರ್.ಸತೀಶ್ ಕುಮಾರ್. ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ. ಪ್ರಾಂಶುಪಾಲ ಕೆ.ಆರ್.ಪ್ರವೀಣ್. ಕಪಾಲಿನಾಗರಾಜ್. ಮೋಹನ್ ಯಾದವ್. ಆಶಾ, ಬಾಲು. ಕಾಂತರಾಜ್, ಅಣ್ಣಯ್ಯ, ಅಂಬಾರಿ ಪರಮೇಶ್. ಮನು. ಆಕಾಶ್. ಶಿವರಾಜ್ ಮತ್ತು ಕರವೇ ಪದಾಧಿಕಾರಿಗಳು ಮತ್ತು ಗ್ರೀನ್ ಕಿಡ್ಸ್ ಡ್ಯಾನ್ಸ್ ಶಾಲೆಯ ಮಕ್ಕಳು ಹಾಜರಿದ್ದರು.
17ಪಿವೈಪಿ01:ಪಿರಿಯಾಪಟ್ಟಣದ ರೋಟರಿ ಭವನದಲ್ಲಿ ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭವನ್ನು ಶಾಸಕ ಕೆ.ಮಹದೇವ್ ಉದ್ಘಾಟಿಸಿ ಮಾತನಾಡಿದರು.

Leave a Comment

Your email address will not be published. Required fields are marked *

error: Content is protected !!
Scroll to Top