ಕನಕದಾಸರು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ಮನುಕುಲದ ಸಮಾನತೆಗಾಗಿ ಕೀರ್ತನೆಗಳ ಮೂಲಕ ಹೋರಾಟ ನಡೆಸಿದ್ದರು ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಕನಕದಾಸರು ಸಾಹಿತ್ಯದ ತನ್ನ ಭಕ್ತಿಯ ಕೀರ್ತನೆಗಳ ಮೂಲಕ ಶ್ರೀ ಕೃಷ್ಣನನ್ನೆ ತನ್ನೆಡೆಗೆ ತಿರುಗುವಂತ್ತೆ ಮಾಡಿದ ಮಹಾನ್ ತಪಸ್ವಿಯಾಗಿದ್ದಾರೆ, ಆದರಿಂದ್ದ ದಾಸ ಸಾಹಿತ್ಯ ಪರಂಪರೆಯಲ್ಲಿ ಇವರ ಹೆಸರು ಅಚ್ಚಳಿಯದೇ ಉಳಿದಿದೆ, ಕನಕದಾಸರು ಈ ಸಮಾಜದಲ್ಲಿದ್ದ ತಾರತಮ್ಯ ನೀತಿಯನ್ನು ಹೋಗಲಾಡಿಸಲು ರಚಿಸಿದ ವಚನಗಳು ಪ್ರಸ್ತುತ ಸಾಮಾಜಿಕ ವ್ಯವಸ್ಥೆಗೆ ಅತ್ಯವಶ್ಯಕವಾಗಿದೆ, ಆದರಿಂದ್ದ ಪ್ರತಿಯೊಬ್ಬ ವ್ಯಕ್ತಿಯೂ ಸಾಧನೆ ಮಾಡಲು ಮತ್ತು ಮುಕ್ತಿ ಹೊಂದಲು ಇಂತಹ ಮಹನೀಯರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು, 

   ಕುರುಬ ಸಮಾಜದ ತಾಲೂಕು ಅಧ್ಯಕ್ಷ ವಿ.ಜಿ ಅಪ್ಪಾಜಿಗೌಡ ಮಾತನಾಡಿ ಯಾವುದೇ ಮಹನೀಯರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಇವರ ಚಿಂತನೆಗಳನ್ನು ಜಗತ್ತಿಗೆ ಸಾರುವ ಕೆಲಸವನ್ನು ಎಲ್ಲರೂ ಮಾಡಬೇಕು, ಅಲ್ಲದೆ ಸರ್ಕಾರವು ಎಲ್ಲಾ ಮಹನೀಯರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಸರ್ಕಾರಿ ರಜೆ ರಹಿತವಾಗಿ ಆಚರಿಸಲು ಕ್ರಮಕೈಗೊಳ್ಳಬೇಕು, ಮಹನೀಯರ ಜಯಂತಿಯನ್ನು ಕಡೆಗಣನೆ ಮಾಡುವವರ ಮೇಲೆ ಶಿಸ್ತು ಕ್ರಮವಾಗಬೇಕು, ಪಟ್ಟಣದ ಪ್ರಮುಖ ವೃತ್ತವೊಂದಕ್ಕೆ ಕನಕದಾಸರ ಹೆಸರನ್ನು ನಾಮಕರಣ ಮಾಡಬೇಕು ಎಂದರು. 

   ಈ ಸಂದರ್ಭ ಜಿ.ಪಂ ಸದಸ್ಯ ಕೆ.ಎಸ್ ಮಂಜುನಾಥ್, ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಸದಸ್ಯ ಮಲ್ಲಿಕಾರ್ಜುನ್, ಇಒ ಡಿ.ಸಿ ಶ್ರುತಿ,  

ತಹಸಿಲ್ದಾರ್ ಶ್ವೇತ ಎನ್ ರವೀಂದ್ರ, ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ, ಸಮಾಜದ ಮುಖಂಡರು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top