ಪೌರಾಣಿಕ ನಾಟಕಗಳು ಸತ್ಯ ಮತ್ತು ಧರ್ಮದ ಸಂಕೇತ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ಬೇಟೆಗೌಡನ ಕೊಪ್ಪಲು ಗ್ರಾಮದ ಶ್ರೀ ದೊಡ್ಡಮ್ಮ ತಾಯಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ  ನಡೆದ ಶ್ರೀ ಶನಿ ಪ್ರಭಾವ ಅಥವಾ ರಾಜ ಸತ್ಯವ್ರತ ಎಂಬ ಪೌರಾಣಿಕ ನಾಟಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಪೌರಾಣಿಕ ನಾಟಕ ಪ್ರದರ್ಶನಗಳು ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನೂ ಪ್ರದರ್ಶನಗೊಳ್ಳುತ್ತಿರುವುದು ಶ್ಲಾಘನೀಯ, ಆಧುನಿಕ ಯುಗದ ಟಿವಿ ಮಾಧ್ಯಮಗಳ ಅಬ್ಬರದ ನಡುವೆ ಹಿಂದಿನ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮಗಳ ಕರ್ತವ್ಯವಾಗಿದೆ, ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಾದರೂ ದುರಹಂಕಾರ ಪ್ರದರ್ಶಿಸಿದರೆ ಅದರ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂಬುದು ಈ ನಾಟಕದ ಸಾರಾಂಶವಾಗಿದೆ, ನವಗ್ರಹಗಳಲ್ಲಿ ಶನಿ ಗ್ರಹವು ದೊಡ್ಡದಾಗಿದ್ದು ಅವರ ಕಥೆಯನ್ನು ಭಕ್ತಿ ಭಾವದಿಂದ ಅಭಿನಯಿಸುತ್ತಿರುವ ಎಲ್ಲಾ ಕಲಾವಿದರಿಗೆ ಶುಭ ಕೋರಿದರು.

    ತಾ.ಪಂ ಮಾಜಿ ಅಧ್ಯಕ್ಷ ಕಾನೂರು ಗೋವಿಂದೇಗೌಡ ಮಾತನಾಡಿ ನಾಟಕ ಪ್ರದರ್ಶನಗಳಿಂದ ಬಂಧುಗಳು ಒಂದೆಡೆ ಸೇರುವುದರಿಂದ ಸಂಬಂಧಗಳು ಬೆಳೆಯುತ್ತವೆ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಲು ನಿಷ್ಠೆ ಹಾಗೂ ಭಕ್ತಿ ಇರಬೇಕು, ಪ್ರತಿ ವರ್ಷ ನಾಟಕ ಪ್ರದರ್ಶನದ ಮೂಲಕ ಸಂಸ್ಕೃತಿ ಅನಾವರಣಗೊಳಿಸುತ್ತಿರುವ ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದರು.

    ಸಾಲಿಗ್ರಾಮದ ನಟರಾಜ್ ಡ್ರಾಮಾ ಸೀನ್ಸ್  ಕಂಪನಿಯ ಭವ್ಯ ವೇದಿಕೆ ಹಾಗೂ ಕುಂಬಾರಕೊಪ್ಪಲಿನ ತಬಲಾ ರಾಮು ವೃಂದದವರಿಂದ ವಾದ್ಯಗೋಷ್ಠಿ ನಡೆಯಿತು, ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಆಗಮಿಸಿ ನಾಟಕ ವೀಕ್ಷಿಸಿದರು.        ಕಾರ್ಯಕ್ರಮದಲ್ಲಿ ನಾಟಕದ ಪ್ರಾಕ್ಟೀಸ್ ಮತ್ತು ಹಾರ್ಮೋನಿಯಂ ಮಾಸ್ಟರ್ ಹೊಳೆನರಸೀಪುರ ತಾಲೂಕಿನ ನೇರಳೆ ಗ್ರಾಮದ ಸುಬ್ಬಯ್ಯ, ಭುವನಹಳ್ಳಿ ಗ್ರಾ.ಪಂ ಅಧ್ಯಕ್ಷ ಈರೇಗೌಡ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಲೋಕೇಶ್, ಕೋಮಲಾಪುರ ಗ್ರಾ.ಪಂ ಉಪಾಧ್ಯಕ್ಷೆ ಗೌರಮ್ಮ ರಾಮನಾಯಕ,  ಸದಸ್ಯರಾದ ಮಣಿಯಮ್ಮ ಕೃಷ್ಣೇಗೌಡ, ರಾಜಯ್ಯ, ಕೆ.ಬಿ ಮೂರ್ತಿ, ಮುಖಂಡರಾದ ಬಿ.ಕೆ ಸೋಮೇಗೌಡ, ವಕೀಲ ಲೋಕೇಶ್, ಬೋರಲಿಂಗೇಗೌಡ, ಕೃಷ್ಣೇಗೌಡ, ದೇವಯ್ಯ, ಸೋಮರಾಜೇಗೌಡ, ನಂದಕುಮಾರ್, ದೊಡ್ಡಮೊಗೆಗೌಡ, ಗಣೇಶ್ ಮತ್ತು ಹಲವರು, ಗ್ರಾಮಸ್ಥರು ಹಾಜರಿದ್ದರು.   

Leave a Comment

Your email address will not be published. Required fields are marked *

error: Content is protected !!
Scroll to Top